ಬೆಂಗಳೂರು ಉತ್ತರ: ಮುಜುರಾಯಿ ದೇಗುಲ ನಾಪತ್ತೆ; ಸಿದ್ದರಾಮಯ್ಯ ಅವರು ಎಸ್ಐಟಿ ರಚನೆ ಮಾಡ್ಬೇಕು: ನಗರದಲ್ಲಿ ಸಿ.ಟಿ ರವಿ
ಮುಜರಾಯಿ ದೇಗುಲ ನಾಪತ್ತೆ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನಸೌಧದಲ್ಲಿ ಮಾಜಿ ಸಚಿವ ಸಿ.ಟಿ ರವಿ ಅವರು, 4100 ಕ್ಕೂ ಹೆಚ್ಚು ಮುಜರಾಯಿ ದೇವಾಲಯ ನಾಪತ್ತೆ ಆಗಿದೆಯಂತೆ. ದೇಗುಲಗಳ ನಾಪತ್ತೆ ಆಗುವುದು ಅದು ಆಶ್ಚರ್ಯ ಸಂಗತಿ. ಇದು ಅದ್ಭುತಗಳಲ್ಲಿ ಕೂಡ ಒಂದಾಗಿದೆ, ಯಾರ್ ನಾಪತ್ತೆ ಮಾಡಿದ್ರು..? ಆನ್ ರೆಕಾರ್ಡ್ ಇರುತ್ತೆ. ಮುಜರಾಯಿ ದೇವಾಲಯ ಹುಡುಕಲು SiT ರಚನೆ ಮಾಡುವ ಅವಶ್ಯಕತೆ ಇದೆ. ಮುಜರಾಯಿ ದೇಗುಲ ಎಲ್ಲಿ ನಾಪತ್ತೆ ? ಅದು ಯಾರೂ ಕಿಡ್ನಾಪ್ ಮಾಡಿದ್ದಾರೆ. ಮುಜರಾಯಿ ದೇಗುಲದ ಆಸ್ತಿ ಏನಾಯ್ತು..? ಎಲ್ಲಾ ಸತ್ಯಾಸತ್ಯೆಗಳು ಹೊರಬರಬೇಕು ಅಂದ್ರೆ ಸಿದ್ದರಾಮಯ್ಯನವರೇ SiT ರಚನೆ ಮಾಡಬೇಕು ಎಂದು ಆಗ್ರಹ ಮಾಡುತ್ತೇನೆ ಎಂದರು.