ಯಶ್ವಂತ ನಂದಿನಿ ಲೇಔಟ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಇರುವ ಆತನ ಅಜ್ಜಿ ಮನೆಗೆ ಬರ್ತಾನೆ. ಅಜ್ಜಿ ಹೂ ತರಲು ಹೋದಾಗ ಮನೆ ಒಳಗಡೆ ಇದ್ದಂತಹ ಚಿನ್ನವನ್ನು ಕದ್ದು ಓಡಿ ಹೋಗ್ತಾನೆ. ಅಜ್ಜಿ ಎಷ್ಟೇ ಫೋನ್ ಮಾಡಿದ್ರು ಈತ ಫೋನ್ ಎತ್ತೋದಿಲ್ಲ. ಬಳಿಕ ಬೀರು ತೆಗೆದು ನೋಡಿದಾಗ ಚಿನ್ನಾಭರಣ ಸಮೇತ ಎಸ್ಕೇಪ್ ಆಗಿರೋದು ಗೊತ್ತಾಗುತ್ತೆ. ತಕ್ಷಣ ಪೊಲೀಸರಿಗೆ ದೂರು ಕೊಟ್ಟು ಆರೋಪಿ ಬಂಧಿಸಿದ್ದಾರೆ.