ಬೆಂಗಳೂರು ಉತ್ತರ: ನಗರದ ಫೈಓವರ್ ಮೇಲಿಂದ ಪಟಾಕಿ ಹಚ್ಚಿ ಎಸೆದ ಪುಂಡರು
ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಪ್ರೈಓವರ್ ಮೇಲಿಂದ ಯುವಕರ ಗುಂಪೊಂದು ಪಟಾಕಿ ಹಚ್ಚಿ ಕೆಳಗೆ ಎಸೆದು ಪರಾರಿಯಾದ ಘಟನೆ ನಡೆದಿದೆ. ಮಂಗಳವಾರ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲೈದು ಮಂದಿ ಯುವಕ-ಯುವತಿಯರ ಗುಂಪು ನಡು ರಾತ್ರಿಯಲ್ಲಿ ಫೈಓವರ್ ಮೇಲೆ ವಾಹನ ನಿಲ್ಲಿಸಿ, ಒಬ್ಬ ಯುವಕ ಪಟಾಕಿಗೆ ಬೆಂಕಿ ಹಚ್ಚಿ ಕೆಳಗೆ ಎಸೆದಿದ್ದಾನೆ. ಅದೃಷ್ಟವಶಾತ್, ಕೆಳಗೆ ವಾಹನ ಸಂಚಾರ ಹಾಗೂ ಜನ ಸಂಚಾರ ಇರದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಯುವಕರ ಈ ಹುಚ್ಚಾಟಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.