ಬೆಂಗಳೂರು ಉತ್ತರ: ಭರವಸೆ ಸಮಿತಿ ಅಧ್ಯಕ್ಷನಾಗಿ ಆರ್ ಡಿಪಿಆರ್ ಇಲಾಖೆ ಕುರಿತು ಚರ್ಚೆ ಮಾಡಿದ್ದೇವೆ: ನಗರದಲ್ಲಿ ರಾಜಣ್ಣ
ಭರವಸೆ ಸಮಿತಿ ಅಧ್ಯಕ್ಷನಾಗಿ ಸಭೆ ನಡೆಸಿದ್ದು, ಆರ್ ಡಿಪಿಆರ್ ಇಲಾಖೆ ಕುರಿತು ಚರ್ಚೆ ಮಾಡಿದ್ದೇವೆ ಎಂದು ಮಾಜಿ ಸಚಿವ ರಾಜಣ್ಣ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ವಿಕಾಸಸೌಧದ ಬಳಿ ಮಾತನಾಡಿದರು. ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಭರವಸೆ ನೀಡಿರುತ್ತಾರೆ, ಭರವಸೆ ಈಡೇರಿದೆಯಾ ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಹಲವಾರು ವಿಚಾರಗಳನ್ನು ಚರ್ಚಿಸಿ ಸಲಹೆ ಕೊಡಲಾಗಿದೆ. ಹಳ್ಳಿಗಾಡಿನ ರಸ್ತೆಗಳ ಕುರಿತು ಚರ್ಚೆ, ನಕಾಶೆಯಲ್ಲಿರುವ ರಸ್ತೆ ತೆರವು ಒಂದು ಕಡೆಯಾದ್ರೆ. ವಾಡಿಕೆ ರಸ್ತೆಗಳನ್ನು ಬಲಾಡ್ಯರು ಮುಚ್ಚಿರುತ್ತಾರೆ. ಬೇಲಿ ಹಾಕಿರುತ್ತಾರೆ, ತಮ್ಮ ಜಮೀನಿಗೆ ಹೋಗೊಕು ಆಗದೆ ಸಮಸ್ಯೆಗಳಿರುತ್ತವೆ. ಈ ವಿಚಾರಚಾಗಿ ಚರ್ಚೆ ಮಾಡಿದ್ದೇವೆ. ಹಳ್ಳಿಗಳಲ್ಲಿ ಸಾರ್ವಜನಿಕ ಆಸ್ತಿ ರಕ್ಷಿಸಬೇಕಿದೆ.