ಹೊಸಕೋಟೆಯ ಬಂಡಹಳ್ಳಿಯಲ್ಲಿ ವಾಹಿದ್ ಖಾನ್ ಎಂಬಾತ ಎಸ್‌ಎಸ್ ಬಾರ್‌ಗೆ ಬಂದು ಕ್ಯಾಷಿಯರ್ ಬಳಿ ಉಚಿತವಾಗಿ ಮದ್ಯ ಕೇಳಿದ್ದಾನೆ. ಸಿಬ್ಬಂದಿ ನಿರಾಕರಿಸಿದಾಗ, ಬಂದೂಕು ಹಿಡಿದು ಕ್ಯಾಷಿಯರ್‌ನನ್ನು ಶೂಟ್ ಮಾಡುವುದಾಗಿ ಬೆದರಿಸಿದ್ದಾನೆ. ವ್ಯಕ್ತಿಯ ವರ್ತನೆಗೆ ಬಾರ್ ಸಿಬ್ಬಂದಿ ಮತ್ತು ಕ್ಯಾಷಿಯರ್ ಬೆಚ್ಚಿ ಬಿದ್ದಿದ್ದಾರೆ. ಅಲ್ಲಿದ್ದ ಕೆಲವರು ವಾಹಿದ್ ಖಾನ್‌ನನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.