ಬೆಂಗಳೂರು ಉತ್ತರ: ನಮ್ಮಗೆ ಹೈಕಮಾಂಡ್ ಸುಪ್ರೀಂ, ರಾಜಣ್ಣ ವಜಾ ಬಗ್ಗೆ ನನಗೆ ಗೊತ್ತಿಲ್ಲ: ನಗರದಲ್ಲಿ ಸಚಿವ ಮಹದೇವಪ್ಪ
ಕೆ.ಎನ್ ರಾಜಣ್ಣ ರಾಜೀನಾಮೆ ವಿಚಾರವಾಗಿ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 12:30 ರ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಹದೇವಪ್ಪ ಅವರು, ನಿನ್ನೆ ನನಗೆ ಜ್ವರ ಇತ್ತು ಮನೆಯಲ್ಲಿ ಮಲಗಿದ್ದೆ. ರಾಜಣ್ಣ ವಜಾ ಆಗಿರೋ ಬಗ್ಗೆ ನನಗೆ ಗೊತ್ತಿಲ್ಲ. ನೀವೇ ಇವಾಗ ನನಗೆ ಹೇಳ್ತಾ ಇರೋದು, ಅದೇನು ಅಂತ ತಿಳಿದುಕೊಂಡು ಮಾತಾಡ್ತೀನಿ. ಕಾಂಗ್ರೆಸ್ ಯಾವಾಗಲೂ ಸಮಾಜಿಕ ನ್ಯಾಯದ ಪರವಾಗಿಯೇ ಇರುತ್ತದೆ. ನಮಗೆ ಹೈ ಕಮಾಂಡೇ ಸುಪ್ರೀಂ. ಹೈ ಕಮಾಂಡ್ ಹೇಳಿದ್ದೇ ಫೈನಲ್. ಕಾಂಗ್ರೆಸ್ ನಲ್ಲಿ ನಾವೆಲ್ಲಾ ದೋಸ್ತಿಗಳೇ ಎಂದರು.