ಬೆಂಗಳೂರು ನಗರ ಮತ್ತು ಜಪಾನ್ ದೇಶದ ನಗೋಯಾ ನಗರಗಳ ನಡುವೆ ಆರ್ಥಿಕ ವಿನಿಮಯವನ್ನು ಉತ್ತೇಜಿಸಲು ನಗೋಯಾ ನಗರದ ಗೌರವಾನ್ವಿತ ಮೇಯರ್ ಇಚಿರೋ ಹಿರೊಸಾವಾ ಮತ್ತು ಬಿಬಿಎಂಪಿಯ ಮಾನ್ಯ ಆಡಳಿತಾಧಿಕಾರಿಯಾದ ತುಷಾರ್ ಗಿರಿನಾಥ್ ಅವರು ಆಗಸ್ಟ್ 11ರಂದು ಸಂಜೆ 3 ಗಂಟೆಗೆ ಪರಸ್ಪರ ಸಹಿಹಾಕುವ ಮೂಲಕ ಜಂಟಿ ಉದ್ದೇಶ ಘೋಷಣೆ ಮಾಡಿಕೊಳ್ಳಲಾಯಿತು.ಸಹೋದರಿ ನಗರಗಳ ಉತ್ತೇಜನಕ್ಕಾಗಿ ಈ ಜಂಟಿ ಉದ್ದೇಶ ಘೋಷಣೆಯನ್ನ ವಿಕಾಸಸೌಧದ ಕೊಠಡಿ ಸಂಖ್ಯೆ 422 ರಲ್ಲಿ ಕೈಗೊಳ್ಳಲಾಯಿತು.