ಬೆಂಗಳೂರು ಉತ್ತರ: ದುಷ್ಟ ಸರ್ಕಾರದ ಎರಡನೇ ವಿಕೆಟ್ ಪತನ: ನಗರದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್
ಕೆ.ಎನ್ ರಾಜಣ್ಣ ಅವರ ರಾಜೀನಾಮೆ ಕುರಿತಂತೆ ಸೋಮವಾರ ಸಂಜೆ 6:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಈ ದುಷ್ಟ ಸರ್ಕಾರದ ಎರಡನೇ ವಿಕೆಟ್ ಪತನ ಆಗಿದೆ. ರಾಜಣ್ಣ ಹೇಳಿಕೆ ರಾಹುಲ್ ಗಾಂಧಿಗೆ ಕಪಾಳ ಮೋಕ್ಷ, ಕಪಾಳಕ್ಕೆ ಹೊಡೆದಿಲ್ಲ ಅಷ್ಡೇ. ಅದರ ರಿವೆಂಜ್ ರಾಹುಲ್ ಈ ಮೂಲಕ ತೀರಿಸಿಕೊಂಡ್ರು. ರಾಜಣ್ಣ ಹೇಳಿಕೆಯಲ್ಲಿ ತಪ್ಪೇನಿಲ್ಲ. ಕೈ ವಾಲ್ಮೀಕಿ ನಾಯಕರಿಗೆ ರಾಹು ಕಾಲ ಶುರು ಆಗಿದ್ದು, ಮೊದಲ ವಿಕೆಟ್ ನಾಗೇಂದ್ರ, ಎರಡನೇ ವಿಕೆಟ್ ರಾಜಣ್ಣ ಎಂದು ವ್ಯಂಗ್ಯ ಮಾಡಿದರು.