ಬೆಂಗಳೂರು ಉತ್ತರ: ಕೆ.ಎನ್ ರಾಜಣ್ಣ ರಾಜೀನಾಮೆ ಉದ್ದೇಶಪೂರ್ವಕ ಅಲ್ಲ: ನಗರದಲ್ಲಿ ಸಚಿವ ಸತೀಶ್ ಜಾರಕಿಹೊಳಿ
ಕೆ.ಎನ್. ರಾಜಣ್ಣ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಶಿವಾನಂದ ಸರ್ಕಲ್ ಬಳಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಹೈ ಕಮಾಂಡ್ ನಿರ್ಧಾರ ಇದು ಇದನ್ನ ಅವರೇ ನಿನ್ನೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಏನಾಗಿದೆ ಅನ್ನೋದನ್ನ ನೋಡಬೇಕು. ಅವರೇ ದೆಹಲಿ ಗೆ ಹೋಗ್ತಾರೆ ಅಲ್ಲಿ ಹೈ ಕಮಾಂಡ್ ಮುಂದೆ ಸ್ಪಷ್ಟನೆ ಕೊಡ್ತಾರೆ. ಕನ್ವಿನ್ಸ್ ಮಾಡ್ತಾರೆ ಹೈ ಕಮಾಂಡ್ ಅನ್ನೊದಿದೆ ನೋಡೋಣ. ಈಗಾಗಲೇ ಇದು ಆಗಿದೆ ವ್ಯಾಖ್ಯಾನ ಮಾಡಲು ಆಗಲ್ಲ. ಮುಂದೆ ನೋಡೋಣ ಇದನ್ನ ತಿಳಿ ಮಾಡೋಣ, ಸಮುದಾಯ ಟಾರ್ಗೆಟ್ ಅನ್ನೋದಿಲ್ಲ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ, ನಾಗೇಂದ್ರ ಘಟನೆನೇ ಬೇರೆ ಇದೇ ಬೇರೆ ಎಂದರು.