ಬೆಂಗಳೂರು ಉತ್ತರ: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಿಬಿಎ ಚುನಾವಣೆ: ನಗರದಲ್ಲಿ ಡಿಸಿಎಂ
ಜಿಬಿಎ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ರೇಸ್ ಕೋರ್ಸ್ ಬಳಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಡಿಸಿಎಂ ಡಿಕೆಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸುಪ್ರೀಂ ಆದೇಶದ ಪ್ರಕಾರ ಚುನಾವಣೆ ಮಾಡ್ತೇವೆ. ಚುನಾವಣೆಗೆ ಸರ್ಕಾರ ಸಿದ್ದವಾಗಿದೆ. ಆದರೆ ರಾಜ್ಯ ಚುನಾವಣೆ ಆಯೋಗೆ ಅಪಿಡವಿಟ್ ಸಲ್ಲಿಸಿದ್ದಾರೆ. ಅದು ರಾಜ್ಯ ಚುನಾವಣೆ ಆಯ್ಕೋಗಕ್ಕೆ ಬಿಟ್ಟಿದ್ದು. ಸರ್ಕಾರ ಎಲ್ಲಾ ತರಹದ ಆದೇಶ ಕೊಡುತ್ತೆ. ನಮಗೆ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ್ ಚುನಾವಣೆ ಆಗಬೇಕು. ಸಂವಿಧಾನದ 737-4ತಿದ್ದುಪಡಿ ಪ್ರಕಾರ ಚುನಾವಣೆ ಸಿದ್ದತೆ ಮಾಡ್ತೇವೆ ಎಂದರು.