ಬಡವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಮನರೇಗಾ ಬಚಾವೋ ಸಂಗ್ರಾಮದ ಭಾಗವಾಗಿ, ಮನರೇಗಾ ಯೋಜನೆಯನ್ನು ಉಳಿಸುವುದು ಹಾಗೂ ಮುಂಬರುವ ಪಂಚಾಯತ್ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಗಾಯತ್ರಿ ವಿಹಾರದಲ್ಲಿ ಮಹತ್ವದ ಸಭೆ ಆಯೋಜಿಸಲಾಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಶ್ರೀ ಡಿ.ಕೆ. ಶಿವಕುಮಾರ್, ಸಚಿವರು ಮತ್ತು ಪಕ್ಷದ ಮುಖಂಡರೊಂದಿಗೆ ಭಾಗವಹಿಸಲಾಯಿತು.