ಬೆಂಗಳೂರು ಉತ್ತರ: ವಿರೋಧ ಪಕ್ಷದ ಆರೋಪಗಳಿಗೆ ಗಮನ ಹರಿಸುವ ಅವಶ್ಯಕತೆ ಇಲ್ಲ: ನಗರದಲ್ಲಿ ಶಾಸಕ ರಂಗನಾಥ್
ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಅವರು ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ರಾಹುಲ್ ಗಾಂಧಿ ವೆಲ್ಕಮ್ ಮಾಡಿದಕ್ಕೆ ಬಿಜೆಪಿ ಟೀಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನರೇಂದ್ರ ಮೋದಿ ಕರ್ನಾಟಕದ ಮೇಲೆ ಹೋದ್ರೆ ಬಿಜೆಪಿ ಅವರು ಏನು ಮಾಡ್ತಾರೆ. ಭೇಟಿ ಮಾಡೋಕೆ ಎಲ್ಲ ಪ್ರಯತ್ನ ಮಾಡ್ತಾರೆ ಅಲ್ವಾ.? ನಮ್ಮ ಹಿರಿಯ ಮುಖಂಡರು, ಮಾಜಿ ಅಧ್ಯಕ್ಷ, ಅದ್ರಿಂದ ಸಿಎಂ ಮತ್ತು ಡಿಸಿಎಂ ಅವರನ್ನ. ಭೇಟಿಯಾಗಿರೋದು ಸಹಜ ಪ್ರಕ್ರಿಯೆ. ವಿರೋಧ ಪಕ್ಷ ಒಂದೊಂದು ಹೆಜ್ಜೆಗೂ ಆರೋಪ ಮಾಡೋದು ನೋಡಿದ್ದೀರಾ, ಆದ್ರ ಬಗ್ಗೆ ಅಷ್ಟು ಗಮನ ಹರಿಸುವ ಅವಶ್ಯಕತೆ ಇಲ್ಲ ಎಂದರು.