ಬೆಂಗಳೂರು ಉತ್ತರ: ಜರ್ಮನ್ ಚಾನ್ಸಲರ್ ಸ್ವಾಗತ ಲೋಪ; ಎಲ್ಲವೂ ಪ್ರೀ ಫಿಕ್ಸ್ ಆಗಿತ್ತು: ನಗರದಲ್ಲಿ ಎಂ.ಬಿ ಪಾಟೀಲ್
ಸಚಿವ ಎಂಬಿ ಪಾಟೀಲ್ ಅವರು ವಿಧಾನಸೌಧದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜರ್ಮನ್ ಚಾನ್ಸಲರ್ ಸ್ವಾಗತದಲ್ಲಿ ಲೋಪ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನಾನು ಸರ್ಕಾರದ ಸಿಎಂ ಪ್ರತಿನಿಧಿಯಾಗಿ ಅವರ ಪರವಾಗಿಯೇ ಹೋಗಿ ಸ್ವಾಗತ ಮಾಡಿದ್ದೇನೆ. ಅವರ ಟೂರ್ ಪ್ರೊಗ್ರಾಂ ಮೊದಲೇ ಫಿಕ್ಸ್ ಆಗಿತ್ತು. ಅವರದು ರಾಜ್ಯ ಸರ್ಕಾರದ ಜೊತೆಗೆ ಯಾವುದೇ ಕಾರ್ಯಕ್ರಮ ಇರಲಿಲ್ಲ. ಬಾಷ್ ಕಂಪನಿ ಜೊತೆಗೆ ಚರ್ಚೆ ಮಾಡುವುದಕ್ಕೆ ಬಂದಿದ್ದರು. ಅವರು ನೇರವಾಗಿ ಬಾಷ್ ಗೆ ಬಂದು ಅಲ್ಲಿಂದ Indian Institute of Science ಗೆ ಹೋಗಿದ್ದರು. ಇದೆಲ್ಲವೂ ಪ್ರೀ ಫಿಕ್ಸ್ ಆಗಿತ್ತು. ಅವರು ಕೇವಲ ಜರ್ಮನ್ ಮೀಡಿಯಾಗೆ ಮಾತ್ರ ಮಾಹಿತಿ ನೀಡಿದ್ದರು. ಅವರನ್ನು ಸಿಎಂ ರಿಸೀವ್ ಮಾಡುವುದಕ್ಕೆ ಮಾತ್ರ ಬರಬಹುದಿತ್ತು.