ಸುಗ್ಗಿ ಸಂಭ್ರಮ ‘ಸಂಕ್ರಾಂತಿ’ ಪ್ರಯುಕ್ತ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ನಾಗರಬಾವಿ ಮಾಳಗಾಳ ಸರ್ಕಲ್ ಬಳಿ ಕಬ್ಬು, ಅವರೆಕಾಯಿ, ಗೆಣಸು, ಕಡಲೆಕಾಯಿ ಹಾಗೂ ಎಳ್ಳು-ಬೆಲ್ಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮೃದ್ಧಿಯ ಸಂಕೇತವಾಗಿರುವ ಈ ಸುಗ್ಗಿಹಬ್ಬ ಸಂಕ್ರಾಂತಿ ರೈತರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ಹಬ್ಬವಾಗಿದ್ದು, ಜನರ ಬದುಕಿನಲ್ಲಿ ಹೊಸ ಆಶೆ, ಸಂತೋಷ ಮತ್ತು ಸಕಾರಾತ್ಮಕ ಬದಲಾವಣೆ ತರಲಿ ಎಂಬ ಸಂದೇಶವನ್ನು ನೀಡಿತು. ಈ ಮೂಲಕ ನಾಡು ಸದಾ ಹಸಿರಾಗಿ, ಸಮೃದ್ಧಿಯಾಗಿ ಬೆಳಗಲಿ ಎಂಬ ಆಶಯ ವ್ಯಕ್ತವಾಯಿತು.