ಬೆಂಗಳೂರು ಉತ್ತರ: ಸಿಎಂ, ಡಿಸಿಎಂ ರಾಹುಲ್ ಗಾಂಧಿ ಭೇಟಿ; ಅದರ ಬಗ್ಗೆ ಏನು ಹೇಳಕ್ಕೆ ಬಯಸಲ್ಲ: ನಗರದಲ್ಲಿ ಪರಮೇಶ್ವರ್
ಸಿಎಂ,ಡಿಸಿಎಂ ರಾಹುಲ್ ಗಾಂಧಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಚಿವ ಪರಮೇಶ್ವರ್ ಅವರು ಮಾಧ್ಯಮಗಳ ಜೊತೆ ಸದಾಶಿವನಗರದಲ್ಲಿ ಮಾತನಾಡಿ, ಸಿಎಂ, ಅಧ್ಯಕ್ಷರು ಏನೋ ಹೇಳಿರಬೇಕು, ಮಾತನಾಡಿರುವವರು ಅವರು ಅಲ್ವಾ? ನೀವು ನಮ್ಮನ್ನ ಕೇಳಿದ್ರೆ ಹೇಗೆ, ಅವರು ಏನು ಮಾತನಾಡಿದ್ದಾರೆ ತಿಳಿಯೋದು ಹೇಗೆ. ಅವರು ಏನು ಹೇಳಿಲ್ಲ, ಏನೂ ಚರ್ಚೆ ಮಾಡಿದಂತೆ ಕಾಣ್ತಿಲ್ಲ. ಉಭಯಕುಶಲೋಪರಿ ಸಾಂಪ್ರತಾ ಅಷ್ಟೇ. ನೀವೇ ತೋರಿಸಿದ್ರಲ್ಲ ಅದಷ್ಟೇ ನಾನು ನೋಡಿದ್ದು, ಅದರ ಬಗ್ಗೆ ನಾನು ಏನುಹೇಳೋಕೆ ಬಯಸಲ್ಲ ಎಂದರು.