ಬೆಂಗಳೂರು ಉತ್ತರ: ಚೆನ್ನಾಗಿ ಕೆಲಸ ಮಾಡಲು ರಾಹುಲ್ ಗಾಂಧಿ ಅವ್ರು ತಿಳಿಸಿದ್ದಾರೆ: ನಗರದಲ್ಲಿ ಡಿಸಿಎಂ
ಸಿಎಂ, ಡಿಸಿಎಂ ರಿಂದ ರಾಹುಲ್ ಗಾಂಧಿ ಜೊತೆ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ರಾಹುಲ್ ಗಾಂಧಿ ಲೋಕಸಭಾ ವಿರೋಧ ಪಕ್ಷದ ನಾಯಕ. ನಾವು ಭೇಟಿ ಮಾಡೋದು, ಮಾತಾಡೋದು, ಪ್ರೋಟೋಕಾಲ್ ಪ್ರಕಾರ ಗೌರವ ಕೊಡೋದು, ಅವರನ್ನು ಸ್ವಾಗತ ಮಾಡೋದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡ್ತಾರಾ..? ನೀವು ಏನೋ ಆಫ್ ದಿ ರೆಕಾರ್ಡ್ ಹೇಳಿದ್ರು ಅಂತಾ ಗೊಂದಲ ಕ್ರಿಯೇಟ್ ಮಾಡ್ಕೊಳ್ತಿದ್ಸೀರಿ, ನಿಮ್ಮ ಟಿವಿ ಮೇಲಿರುವ ಗೌರವ ವನ್ನು ಹಾಳು ಮಾಡ್ಕೊಳ್ತಿದ್ದೀರಿ ಹೊರತು, ಯಾವ ಸಂದೇಶವನ್ನು ಕೊಟ್ಟಿಲ್ಲ, ಭೇಟಿ ಮಾಡಿದ್ದೇವೆ. ಚೆನ್ನಾಗಿ ಕೆಲಸ ಮಾಡ್ಕೊಂಡು ಹೋಗಿ ಎಂದಿದ್ದಾರೆ.