ಬೆಂಗಳೂರು ಉತ್ತರ: ಬೆಂಗಳೂರು ವಿವಿಯಲ್ಲಿ ಬೀದಿ ನಾಯಿ ಕಾಟ, ಡೆಡ್ಲಿ ಡಾಗ್ ಅಟ್ಯಾಕ್‌ಗೆ ಓರ್ವ ವಿದ್ಯಾರ್ಥಿನಿ ಗಂಭೀರ
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದೆ. ಆಗಸ್ಟ್ 12 ಬೆಳಿಗ್ಗೆ 11 ಗಂಟೆ ಸುಮಾರಿಗೆ ಇಬ್ಬರು ವಿದ್ಯಾರ್ಥಿನಿಯರಿಗೆ ನಾಯಿ ಕಚ್ಚಿದ್ದು ಒಬ್ಬರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರು ವಿವಿ ಆವರಣದಲ್ಲಿ ವಸತಿ ನಿಲಯದಲ್ಲಿ ಬೀದಿ ನಾಯಿಗಳು ವ್ಯಾಪಕ ಇದ್ದು ಅಗತ್ಯ ಕ್ರಮ ಕೈಗೊಳ್ಳಬೇಕು ಅಂತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.