ಬೆಂಗಳೂರು ಉತ್ತರ: ಉಂಡ ಮನೆಗೆ ದ್ರೋಹ, ವೈದ್ಯೆ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳಿ ನಗರದಲ್ಲಿ ಪೊಲೀಸರ ವಶಕ್ಕೆ
ಬೆಂಗಳೂರು ಸಿದ್ದಾಪುರ ಪೊಲೀಸರ ಕಾರ್ಯಚರಣೆ ಹಿನ್ನೆಲೆ ಉಂಡ ಮನೆಗೆ ದ್ರೋಹ ಬಗೆದ ಖತರ್ನಾಕ್ ಕಳ್ಳಿಯನ್ನ ಬಂಧಿಸಿದ್ದು, ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕೆಯಿಂದ ವಶಕ್ಕೆ ಪಡೆದಂತ 22 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಪೊಲೀಸ್ ಆಯುಕ್ತರು ಕಚೇರಿಯಲ್ಲಿ, ಪರಿಶೀಲನೆ ನಡೆಸಲಾಯಿತು. ಆಂಧ್ರದ ಖಾಕಿನಾಡ ಮೂಲದ ಅನ್ನಾರೆಡ್ಡಿ ದುರ್ಗಾ ಬಂಧಿತ ಕಳ್ಳಿಯಗಿದ್ದು, ಬೆಂಗಳೂರಿನ ಪ್ರಸಿದ್ಧ ಅಪೊಲೊ ಆಸ್ಪತ್ರೆ ವೈದ್ಯೆ ಮನೆಯಲ್ಲಿ, ಆಂಧ್ರ ಮೂಲದ ಏಜೆನ್ಸಿ ಮೂಲಕ ದುರ್ಗಾ ಕೆಲಸಕ್ಕೆ ಸೇರಿದ್ದಳು. ಅಪೊಲೊ ಆಸ್ಪತ್ರೆ ವೈದ್ಯೆ ಶೈಲಜಾ ಕೂಡ ಆಂಧ್ರ ಮೂಲದವರಾಗಿದ್ದು, ಪರಿಚಯಸ್ಥ ಆಂಧ್ರ ಮೂಲದ ಏಜೆನ್ಸಿ ಮೂಲಕ ಮಹಿಳೆಯನ್ನ ಕೆಲಸಕ್ಕೆ ಸೇರಿಸಿಕೊಂಡಿದ್ದರು. ವೈದ್ಯೆ ಶೈಲಜಾ ಗೆ ಕ್ಯಾನ್ಸರ್ ಉಂಟಾಗಿದ್ದು ಆಗಾಗ ತೆರಪಿ ಮಾಡಿಸಬೇಕಾಗಿತ್ತು