ಬೆಂಗಳೂರು ಉತ್ತರ: ತರಕಾರಿ ವ್ಯಾಪಾರದ ಸೋಗಿನಲ್ಲಿ ಮಾದಕ ಪದಾರ್ಥ ಮಾರಾಟ, ಸಂಪಿಗೆಹಳ್ಳಿ ಪೊಲೀಸರಿಂದ ಬಿಬಿಎಂ ಪದವೀಧರನ ಬಂಧನ
ತರಕಾರಿ ಮಾರಾಟ ಮಾಡುವ ಸೋಗಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಸಂಪಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಾಸನ ಮೂಲದ ವಾಸಿಂ ಅಕ್ರಂ ಬಂಧಿತ ಆರೋಪಿಯಾಗಿದ್ದು,ಆತನಿಂದ 30 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.ಪ್ರಕರಣದ ಕುರಿತು ಆಗಸ್ಟ್ 19ರಂದು ಬೆಳಿಗ್ಗೆ 11:30ಕ್ಕೆ ಮಾಹಿತಿ ನೀಡಿದ ಪೊಲೀಸರು, ಬೆಂಗಳೂರಿಗೆ ತರಕಾರಿ ಮಾರಲು ಬರುತ್ತಿದ್ದ ಆರೋಪಿ ಬಳಿಕ ಫೈರೋಜ್ ಎಂಬಾತನಿಂದ ಎಂಡಿಎಂಎ ಪಡೆದು ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ.ಅಲ್ಲದೆ ಆರೋಪಿ ಬಿಬಿಎಂ ಪಧವೀಧರ ಎಂಬುದು ತನಿಖೆ ವೇಳೆ ತಿಳಿದುಬಂದಿದೆ" ಎಂದು ಮಾಹಿತಿ ನೀಡಿದರು.