ಬೆಂಗಳೂರು ಉತ್ತರ: ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಮೇಲೂ ಅನುಮಾನ – ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಟೀಕೆ
ಧರ್ಮಸ್ಥಳ ಪ್ರಕರಣ ಕುರಿತು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಸರ್ಕಾರದ ವಿರುದ್ಧ ಮಾಜಿ ಗೃಹ ಸಚಿವ ಆರಗಜ್ಞಾನೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇದು ಶ್ರದ್ಧಾ ಕೇಂದ್ರವನ್ನು ಭಂಗಗೊಳಿಸುವ ಕೆಲಸ. ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಕೋರ್ಟ್ ತನಿಖೆ ನಡೆಸಲು ಹೇಳಿತ್ತು.ಆದರೆ ಎಸ್‌ಐಟಿ ರಚನೆ ಮಾಡಿ ಎಂದು ಸೂಚಿಸಿಲ್ಲ. ಯಾರೋ ಮುಸುಕುಧಾರಿಗಳ ಹೇಳಿಕೆಯನ್ನು ಆಧಾರ ಮಾಡಿಕೊಂಡಿದ್ದಾರೆ. ಈಗ ಎಸ್‌ಐಟಿ ಮೇಲೂ ಅನುಮಾನ ಮೂಡಿದೆ” ಎಂದರು. ಮತಾಂಧರ ಪ್ರಭಾವ ಇದೆ, ಸರ್ಕಾರವೂ ಆರೋಪಿಯಾಗುತ್ತದೆ ಎಂದು ಟೀಕಿಸಿದರು. “ನೂರಾರು ಹೆಣಗಳು ಎಲ್ಲಿಂದ ಬರುತ್ತವೆ? ಧರ್ಮಧಿಕಾರಿ ವಿರುದ್ಧ ಅಪಪ್ರಚಾರ ನಡೆಯುತ್ತಿದೆ, ಭಕ್ತರೂ ಅಲ್ಲಿಗೆ ಹೋಗಲು ಹೆದರುತ್ತಿದ್ದಾರೆ” ಎಂದರು.