ಬೆಂಗಳೂರು ಉತ್ತರ: ಬಟ್ಟೆ ವ್ಯಾಪಾರ ಸೋಗಿನಲ್ಲಿ ಡ್ರಗ್ಸ್ ದಂಧೆ, ನಗರದಲ್ಲಿ ಆಫ್ರಿಕನ್ ಪ್ರಜೆ ಬಂಧಿಸಿದ ಸಿಸಿಬಿ ಪೊಲೀಸರು
ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಆಪ್ರಿಕಾ ಮೂಲದ ಆರೋಪಿಯನ್ನ ಸಿಸಿಬಿಯ ಮಾದಕ ಪದಾರ್ಥ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.ಜಾನ್ ಡಿ'ಕೊಸ್ಟಾ ಬಂಧಿತ ಆರೋಪಿ. ಪ್ರಕರಣದ ಕುರಿತು ಆಗಸ್ಟ್ 19ರಂದು ಬೆಳಿಗ್ಗೆ 11:30ಕ್ಕೆ ಮಾಹಿತಿ ನೀಡಿದ ಪೊಲೀಸರು, 2024ರಲ್ಲಿ ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ, ಆರಂಭದಲ್ಲಿ ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಆರಂಭಿಸಿದ್ದ.ಬಳಿಕ ಇದೇ ವರ್ಷದ ಆರಂಭದಲ್ಲಿ ಬೆಂಗಳೂರಿಗೆ ಬಂದು ಅವಲಹಳ್ಳಿ ವ್ಯಾಪ್ತಿಯಲ್ಲಿ ಬಟ್ಟೆ ವ್ಯಾಪಾರದ ಜೊತೆಗೆ ಮಾದಕ ದಂಧೆಯನ್ನೂ ಆರಂಭಿಸಿದ್ದ. ಸದ್ಯ ಆತನಿಂದ ಒಟ್ಟು 40 ಲಕ್ಷ ಮೌಲ್ಯದ 255 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್ ವಶಪಡಿಸಿಕೊಳ್ಳಲಾಗಿದೆ ಎಂದರು.