ಬೆಂಗಳೂರು ಉತ್ತರ: ಸಮಿತಿ ಶಿಫಾರಸಿನಂತೆ ಕಲ್ಲೇಶ್ ಶಿವತ್ತೋಮರಾವ್‌ಗೆ ಸನ್ಮಾನ: ನಗರದಲ್ಲಿ ಸಚಿವ ಶಿವರಾಜ ತಂಗಡಗಿ
ಸಚಿವ ಶಿವರಾಜ್ ತಂಗಡಗಿ ಅವರು ದೇವರಾಜ್ ಅರಸು ಪ್ರಶಸ್ತಿ ಕುರಿತು ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧ ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು.. ಈ ಬಾರಿಯೂ ಪ್ರಶಸ್ತಿ ನೀಡಲು ನಿರ್ಧಾರವಾಗಿದ್ದು, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಕಾಗೋಡು ತಿಮ್ಮಪ್ಪ ಹಾಗೂ ಎಸ್.ಕೆ. ಕಾಂತರಾಜ್ ಅವರಿಗೆ ನೀಡಲಾಗಿತ್ತು. ಈಗ ಉಡುಪಿ ಜಿಲ್ಲೆಯ ಕಲ್ಲೇಶ್ ಶಿವತ್ತೋಮರಾವ್ ಅವರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಅವರು ಹಿಂದುಳಿದ ವರ್ಗದ ಬಗ್ಗೆ ಜಾಗೃತಿ ಮೂಡಿಸಿ ಅನೇಕ ಚಳುವಳಿಗಳನ್ನು ನಡೆಸಿರುವುದರಿಂದ ಸಮಿತಿ ಶಿಫಾರಸಿನಂತೆ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ತುಂಗಭದ್ರಾ ಅಣೆಕಟ್ಟು ವಿಚಾರದಲ್ಲಿ ಸಂಬಂಧಿಸಿದ ಸಚಿವರು ಉತ್ತರ ನೀಡುವುದಾಗಿ ತಿಳಿಸಿದ್ದಾರೆ.