⚠️ ಸೆ.12ರಂದು ವಿದ್ಯುತ್ ವ್ಯತ್ಯಯ: ಶಹಾಪುರದಿಂದ ಹಲವು ಗ್ರಾಮಗಳವರೆಗೆ ಪರಿಣಾಮ!
ಇಂದು ವಿದ್ಯುತ್ ವ್ಯತ್ಯಯ
============
ಯಾದಗಿರಿ, ಸೆಪ್ಟೆಂಬರ್.12 : ಜೆಸ್ಕಾಂ ಕಾರ್ಯಾಚರಣೆ ಮತ್ತು ಪಾಲನೆ ವಿಭಾಗದ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಸೆಪ್ಟೆಂಬರ್. 12 ರಂದು ಬೆಳಿಗ್ಗೆ 10:30 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಕೇಂದ್ರಗಳು/ಮಾರ್ಗಗಳು: 110/33/11 ಕೆ.ವಿ ಮಾರ್ಗ, ಶಹಾಪುರ,110/33/11 ಕೆ.ವಿ ಮಾರ್ಗ, ದಿಗ್ಗಿ, 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ಗೋಗಿ, 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ಸಗರ, 33 ಕೆ.ವಿ ಬಿಸಿಪಿಎಲ್.
ಆದ್ದರಿಂದ ಶಹಾಪುರ ಪಟ್ಟಣ, ಸಗರ, ಗೋಗಿ, ಬಿಸಿಪಿಎಲ್, ಹತ್ತಿಗೂಡೂರು, ಹಯ್ಯಹಾಳ, ಬಸವಂತಪುರ, ಮುನಮುಟಗಿ, ಹೈಕೂರು, ಮದರಕಲ್, ರಸ್ತಾಪುರ, ಬೆನಕನಹಳ್ಳಿ, ಕನ್ಯಾಕೋಳೂರು, ವಿಭೂತಿಹಳ್ಳಿ, ಬೊಮ್ಮನಹಳ್ಳಿ, ಅಣ್ಣೂರ್ ಹಾಗೂ ಸುತ್ತಮುತ್ತಲಿನ ತಾಂಡಾ ಮತ್ತು ದೊಡ್ಡ ಗ್ರಾಮಗಳ ಸಾರ್ವಜನಿಕರು ಹಾಗೂ ಗ್ರಾಹಕರು ಜೆಸ್ಕಾಂ ಸಿಬ್ಬಂದಿಯೊAದಿಗೆ ಸಹಕರಿಸಬೇಕಾಗಿ ಜೆಸ್ಕಾಂ ಶೋರಾಪೂರ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
****
Yadgir, Yadgir | Sep 12, 2026