🚨 ಬಾಲಕಾರ್ಮಿಕರ ವಿರುದ್ಧ ವಿಶೇಷ ಕಾರ್ಯಾಚರಣೆ
ಇಂದು ಕೊಡೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜನಕೊಳ್ಳುರು ಗ್ರಾಮದಲ್ಲಿ ಹೋಟೆಲ್ಗಳು, ಟೀ ಅಂಗಡಿಗಳು ಹಾಗೂ ಡಾಬಾಗಳಿಗೆ ಖುದ್ದಾಗಿ ಭೇಟಿ ನೀಡಿ ಬಾಲಕಾರ್ಮಿಕರ ಕುರಿತು ವಿಶೇಷ ಕಾರ್ಯಾಚರಣೆ ಹಾಗೂ ಪರಿಶೀಲನೆ ನಡೆಸಲಾಯಿತು.
ಮಕ್ಕಳನ್ನು ದುಡಿಮೆಗೆ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.
📚 ಮಕ್ಕಳ ಕೈಯಲ್ಲಿ ಕೆಲಸವಲ್ಲ, ಶಿಕ್ಷಣದ ಪುಸ್ತಕವಿರಲಿ.
🤝 ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸೋಣ.
#YadgirDistrictPolice #KodekalPolice #ChildLabour #StopChildLabour #ChildProtection #YadgirPolice
Yadgir, Yadgir | Sep 12, 2026