ಕಲಂ 371ಜೆ ಅನುಷ್ಠಾನ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನ
ಭೀಮರಾಯನಗುಡಿ, ಸೆ.12: ಕೃಷಿ ಮಹಾವಿದ್ಯಾಲಯ, ಭೀಮರಾಯನಗುಡಿಯಲ್ಲಿ ಕಲಂ 371ಜೆ ಅನುಷ್ಠಾನದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ (ಸೆ.12) ಬೆಳಿಗ್ಗೆ 10 ಗಂಟೆಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಡೀನ್ರಾದ ಪ್ರಕಾಶ್ ಕುಚನೂರ ವಹಿಸಿದ್ದರು.
ಈ ಸಂದರ್ಭದಲ್ಲಿ ಕಕಪ್ರ ಅ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಮಲ್ಲಯ್ಯ ಕಮತಗಿ, ಚನ್ನಪ್ಪ ಆನೆಗುಂದಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಗಿರೆಪ್ಪಗೌಡ ಬಾಣತಿಹಾಳ, ಅಹಮದ್ ಪಠಾಣ್, ಶಿವಣ್ಣ ಇಜೇರಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಶರಣು ಮಂದರವಾಡ ಹಾಗೂ ಷಣ್ಮುಖಪ್ಪ ಸಾಹುಕಾರ್ ಉಪಸ್ಥಿತರಿದ್ದರು.
ಜಾಗೃತಿ ಅಭಿಯಾನದ ಮೂಲಕ ಕಲಂ 371ಜೆ ಅನುಷ್ಠಾನ, ಅದರ ಉದ್ದೇಶ ಹಾಗೂ ವಿದ್ಯಾರ್ಥಿಗಳಿಗೆ ದೊರೆಯಬಹುದಾದ ಅವಕಾಶಗಳ ಕುರಿತು ಅರಿವು ಮೂಡಿಸಲಾಯಿತು.
Yadgir, Yadgir | Sep 13, 2026