ಬೆಂಗಳೂರು ಉತ್ತರ: ನಾಯಿಗಳನ್ನ ಕೊಲ್ಲದೇ ಸೇಫ್ ಜಾಗದಲ್ಲಿ ಕೂಡಿಹಾಕಲು ಸುಪ್ರೀಂ ಆದೇಶ: ನಗರದಲ್ಲಿ ಶಾಸಕ ಭರತ್ ಶೆಟ್ಟಿ
ಬೀದಿ ನಾಯಿಗಳ ನಿಯಂತ್ರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 2:40 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಡಾ. ಭರತ್ ಶೆಟ್ಟಿ, ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರೂಲಿಂಗ್ ನೀಡಿದೆ, ಅದನ್ನ ಎಲ್ಲರೂ ಪಾಲನೆ ಮಾಡಬೇಕು. ಸುಪ್ರೀಂ ಕೋರ್ಟ್ ನಾಯಿಗಳನ್ನ ಕೊಲ್ಲಲು ಹೇಳಿಲ್ಲ. ನಾಯಿಗಳನ್ನ ಸೇಫ್ ಜಾಗದಲ್ಲಿ ಹಾಕಬೇಕು. ದೆಹಲಿಗೆ ಮಾತ್ರ ತೀರ್ಪು ಸೀಮಿತವಾಗದೆ, ಎಲ್ಲೆಡೆ ಅಳವಡಿಸಬೇಕು. ಮತ್ತೆ ಬೀದಿನಾಯಿಗಳನ್ನ ಈಚೆಗೆ ಬರದಂತೆ ಕ್ರಮ ಆಗಬೇಕು. ರೇಬೀಸ್ ಬಂದಿರೋ ಹಾಗೂ ಬೀದಿ ನಾಯಿಗಳು ಕಚ್ಚಿ ಅನೇಕರು ಸಾವನ್ನಪ್ಪಿದ್ದಾರೆ, ಅಟ್ಯಾಕ್ ಮಾಡೋ ದೃಶ್ಯಗಳನ್ನು ನೋಡಿದ್ದೇವೆ. ಹಾಗಂತ ನಾಯಿಗಳನ್ನ ಕೊಲ್ಲಲು ನಾವು ಹೇಳ್ತಿಲ್ಲ