ಬೆಂಗಳೂರು ಉತ್ತರ: ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ಧ್ವಜಾರೋಹಣಕ್ಕೆ ಸಕಲ ಸಿದ್ದತೆ: ನಗರದಲ್ಲಿ ಮಹೇಶ್ವರ್ ರಾವ್
ಮಾಣಿಕ್ ಷಾ ಪೆರೇಡ್ ಗ್ರೌಂಡ್ ನಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ವಾತಂತ್ರ್ಯೋತ್ಸವದ ಸಿದ್ಧತೆಗಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಆಗಸ್ಟ್ 15 ರಂದು ದ್ವಜಾರೋಹಣ ಆಗಲಿದ್ದು, ಅದ್ಧೂರಿ ಕಾರ್ಯಕ್ರಮದ ಸಿದ್ಧತೆ ನಡೆದಿದೆ. ಮಳೆ ಇರುವ ಕಾರಣ ಮಾರ್ಚ್ ಫಾಸ್ಟ್ ಮಾಡ್ತಿದ್ದಾರೆ, ಗ್ರೌಂಡ್ ನಲ್ಲಿ ಮಳೆಗೆ ಯಾವ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಶಾಮೀಯಾನದ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 15 ರ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಆಗುತ್ತದೆ, ನಂತರ ಓಪನ್ ಜೀಪ್ ನಲ್ಲಿ ಸಿಎಂ ಪೆರೇಡ್ ಪರಿವೀಕ್ಷಣೆ ಮಾಡಲಿದ್ದಾರೆ ನಂತರ ಗೌರವ ರಕ್ಷೆ ಸ್ವೀಕಾರ ನಂತರ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ನೀಡುತ್ತಾರೆ ಎಂದರು.