ಬೆಂಗಳೂರು ಉತ್ತರ: CCTV ವಿಡಿಯೋ, ಡಿ.ಜೆ ಹಳ್ಳಿಯಲ್ಲಿ ಮನೆ ಪಕ್ಕ ನಿಲ್ಲಿಸಿದ್ದ ಹೊಸ ಬೈಕ್‌ಗೆ ದುಷ್ಕರ್ಮಿ ಪೆಟ್ರೋಲ್ ಸುರಿದು ಬೆಂಕಿ
ಮನೆ ಪಕ್ಕ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಯೊಬ್ಬ ಬೆಂಕಿಯಿಟ್ಟ ಘಟನೆ ಡಿ.ಜೆ.ಹಳ್ಳಿಯ ವಿಶ್ವೇಶ್ವರಯ್ಯ ನಗರದಲ್ಲಿ ನಡೆದಿದೆ.ಆಗಸ್ಟ್ 13ರಂದು ಬೆಳಗ್ಗಿನ ಜಾವ 2.41ರ ಸುಮಾರಿಗೆ ಘಟನೆ ನಡೆದಿದ್ದು, ಗೋಪಿ ಎಂಬುವವರ ಹೊಸ ಬೈಕ್ ಅಗ್ನಿಗಾಹುತಿಯಾಗಿದೆ.ಮನೆ ಪಕ್ಕ ನಿಲ್ಲಿಸಿದ್ದ ಬೈಕ್ ಬಳಿ ರಾತ್ರಿ ಸಂದರ್ಭದಲ್ಲಿ ಬಂದಿದ್ದ ದುಷ್ಕರ್ಮಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.ಕಿಡಿಗೇಡಿಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ಬೈಕ್ ಮಾಲೀಕ ಗೋಪಿ,ಡಿ.ಜೆ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.