ಬೆಂಗಳೂರು ಉತ್ತರ: ಉಳ್ಳಾಲದ ಆರೈಕೆ ಹೆಸರಿನ ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ ನಟಿ ಐಶ್ವರ್ಯಾ ಸಿಂಧೋಗಿ
ಬಿಗ್ ಬಾಸ್ ಕನ್ನಡ ಸೀಸನ್ ೧೧ರ ಖ್ಯಾತಿಯ ನಟಿ ಐಶ್ವರ್ಯಾ ಸಿಂಧೋಗಿ, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಮವಾರವೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರೂ, ಮಂಗಳವಾರವೂ ಆ ಸೆಲೆಬ್ರೇಷನ್ ಮುಂದುವರಿದಿದೆ. ವಿಶೇಷ ಏನೆಂದರೆ ಆಪ್ತರ ಸಮ್ಮುಖದಲ್ಲಿ ಕೇಕ್ ಕಟ್ ಮಾಡದೇ, ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಬೆಂಗಳೂರಿನ ಉಳ್ಳಾಲದ ಬಳಿ ಇರುವ ಆರೈಕೆ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿಯೇ ಹುಟ್ಟುಹಬ್ಬವನ್ನು ಹಿರಿ ಜೀವಗಳ ಜೊತೆಗೆ ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ವಿಡಿಯೋ ಹಂಚಿಕೊಂಡಿದ್ದಾರೆ.