ಬೆಂಗಳೂರು ಉತ್ತರ: ಧರ್ಮಸ್ಥಳ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಜನರಲ್ಲಿ ಗಾಬರಿ — ನಗರದಲ್ಲಿ ಶಾಸಕ ವಿಜಯೇಂದ್ರ
ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ. ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ಷಡ್ಯಂತ್ರ ಇದೆ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿಕೆ ಕೊಟ್ಟಿದ್ದಾರೆ. ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇನ್ನೂ ಯಾವಾಗ ಸಮಯ ಬರಲಿದೆ? ರಾಜ್ಯದ ಜನರು- ಕೋಟಿ, ಕೋಟಿ ಭಕ್ತಾದಿಗಳು ಇವತ್ತು ಆತಂಕದಲ್ಲಿದ್ದಾರೆ.