ಬೆಂಗಳೂರು ಉತ್ತರ: ನಗರದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿರುವ ದರ್ಶನ್ ಫ್ಯಾನ್ಸ್!
ಆಗಸ್ಟ್ 17ರ ಬೆಳಗ್ಗೆ 10 ಗಂಟೆಯಿಂದ ನಗರದಲ್ಲಿ ದರ್ಶನ್ ಫ್ಯಾನ್ಸ್ ಹೊಸ ದಾಖಲೆಯನ್ನು ಬರೆಯುತ್ತಿದ್ದಾರೆ. ಒಂದು ಕಡೆ ದರ್ಶನ್ ಜೈಲು ಪಾಲಾಗಿದ್ದಾರೆ ಇನ್ನೊಂದು ಕಡೆ ಅಭಿಮಾನಿಗಳು ದಾಸನನ್ನ ಜೈಲಿನಿಂದ ಹೊರಗಡೆಯೂ ಹೊತ್ತು ಮೆರೆಸುತ್ತಿದ್ದಾರೆ. ದರ್ಶನ್ ಆಗಸ್ಟ್ 14 ಜೈಲು ಪಾಲಾದರು, ಆಗಸ್ಟ್ 15ಕ್ಕೆ ಡೆವಿಲ್ ಸಿನಿಮಾದ ಬಹುನಿರೀಕ್ಷಿತ ಇದ್ದರೆ ನೆಮ್ಮದಿಯಾಗಿರಬೇಕು ಹಾಡು ರಿಲೀಸ್ ಆಗಬೇಕಿತ್ತು. ಆದ್ರೆ ದರ್ಶನ್ ಜೈಲಿಗೆ ಸೇರಿದ್ದರಿಂದ ಹಾಡು ರಿಲೀಸ್ ಆಗಿಲ್ಲ. ಇದೇ ಕಾರಣಕ್ಕೆ ಈಗ ಇದ್ರೆ ನೆಮ್ಮದಿಯಾಗಿರ್ಬೇಕು ಟಿ-ಶರ್ಟ್ ಅನ್ನ ಪ್ರಿಂಟ್ ಮಾಡಿ ವೈರಲ್ ಮಾಡ್ತಾ ಇದ್ದಾರೆ. ಅಭಿಮಾನಿಗಳು ಟೀ ಶರ್ಟ್ ಖರೀದಿಸುವುದಕ್ಕೆ ಮುಗಿಬಿದ್ದಿದ್ದಾರೆ.