ಬೆಂಗಳೂರು ಉತ್ತರ: ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರ ಬೇಡ, ನ್ಯಾಯ ಸಿಗಲಿ: ಸಾರಿಗೆ ಸಚಿವ ರಾಮಲಿಂಗರೆಡ್ಡಿ
ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಧರ್ಮಸ್ಥಳ ವಿಚಾರವಾಗಿ, ಸೌಜನ್ಯ ಕೊಲೆ 2012ರಲ್ಲಿ ಆಗಿತ್ತು, ಸಿಬಿಐ ತನಿಖೆ ಆದ್ರೂ ಆರೋಪಿ ಪತ್ತೆ ಆಗಿಲ್ಲ. ಮುಸುಕುದಾರಿ ಬಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡ್ತಾರೆ, ತನಿಖೆ ಮಾಡಿ ಅಂತ ಮ್ಯಾಜಿಸ್ಟ್ರೇಟ್ ಹೇಳ್ತಾರೆ. ಧರ್ಮಸ್ಥಳದ ಬಗ್ಗೆ ಪ್ರಚಾರ, ಅಪಪ್ರಚಾರ ಎಲ್ಲಾ ಆಗಿತ್ತು. ಹಲವು ಕಡೆ ಆಗೆದ್ರೂ, ಏನೂ ಕುರುವು ಪತ್ತೆ ಆಗಿಲ್ಲ. ವಿಜಯೆಂದ್ರ ಕೂಡ ಧರ್ಮಸ್ಥಳಕ್ಕೆ ಹೋಗಿದ್ರು. ಮಂಜುನಾಥ, ಅಣ್ಣಪ್ಪನ ವಿರುದ್ಧ ಯಾರೂ ಇಲ್ಲ. ಕ್ಲಾರಿಟಿ ಬರಲಿ ಎಂದು ಸರ್ಕಾರ ಎಸ್ ಐಟಿ ರಚನೆ ಮಾಡಿದ್ದೇವು. ಯೂಟ್ಯೂಬರ್ಸ್ ಮೇಲಿದ್ದ ನಿರ್ಬಂಧ ಕೋರ್ಟ್ ತೆರವು ಮಾಡಿದೆ.