ಶಿವಮೊಗ್ಗ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಚಿನ್ನದ ಸರ ನಾಪತ್ತೆ, ದೂರು ದಾಖಲು
ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿ ಇದ್ದಂತಹ ಚಿನ್ನದ ನಕ್ಲೇಸ್ ಕಳ್ಳತನವಾಗಿರುವಾಗ ಘಟನೆ ಬುಧವಾರ ನಡೆದಿದೆ ಭದ್ರಾವತಿಯ ಕೂಡ್ಲಿಕೆರೆ ಗ್ರಾಮದ ಮಹಿಳೆ ತನ್ನ ತಾಯಿ ಮತ್ತು ಮಗಳ ಜೊತೆ ದಾವಣಗೆರೆ ಜಿಲ್ಲೆಯ ಕುಂಕುವ ಗ್ರಾಮದಿಂದ ಮದುವೆ ಮುಗಿಸಿಕೊಂಡು ವಾಪಸ್ ಊರಿಗೆ ತೆರಳಲು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದರು ಇನ್ನಾ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆ ಹೋಗುವ ಬಸ್ ಹತ್ತಿದ್ದು ಶಿವಮೊಗ್ಗದ ಬೈಪಾಸ್ ಸಮೀಪ ತೆರಳುತ್ತಿದ್ದಾಗ ಆಧಾರ್ ಕಾರ್ಡ್ ತೆಗೆಯಲು ಹೋದಾಗ ವ್ಯಾನಿಟಿ ಬ್ಯಾಗ್ ನೋಡಿದ್ದ ವೇಳೆ ಮಹಿಳೆಗೆ ತನ್ನ ಬ್ಯಾಗ್ ನಲ್ಲಿದ್ದ 15 ಗ್ರಾಂ ತೂಕದ ಚಿನ್ನದ ನಕ್ಲೇಸ್ ಕಳವು ಆಗಿರುವುದು ಕಂಡುಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.