ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಬೆಂಬಲ ಸಿಕ್ಕಿದೆ: ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಬೆಂಬಲ ಹಾಗೂ ಬಾರಿ ಅಂತರದ ಜಯವನ್ನು ಕೊಟ್ಟಿದ್ದಾರೆ.ನನ್ನ ಸಹಕಾರಿ ಬದುಕಿನಲ್ಲಿ ಅಷ್ಟರಮಟ್ಟಿಗೆ ವಿರೋಧವಾಗಿದ್ದು ನೋಡಿಲ್ಲ.ಜಾತಿ,ಪಕ್ಷದ ಆಧಾರದ ಮೇಲೆ ಸಹಕಾರಿ ವ್ಯವಸ್ಥೆ ಇರಬಾರದು ಎಂದು ಹೇಳಿದ್ದೆವು. ಅದೇ ರೀತಿ ಪಾಲಿಸಿಕೊಂಡು ಬಂದವರು ನಾವು ಆದರೆ ಈ ಬಾರಿ ಚುನಾವಣೆಯಲ್ಲಿ ಅದೆಲ್ಲವೂ ನಡೆಯಿತು. ಆದರೂ ಮತದಾರರು ಅದಕ್ಕೆ ಉತ್ತರವನ್ನ ನೀಡಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ಅವರು ಹೇಳಿದ್ದಾರೆ. ಬುಧವಾರ ತೀರ್ಥಹಳ್ಳಿ ಪಟ್ಟಣದ ಸಹ್ಯಾದ್ರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಹಕಾರಿಗಳು ಪಕ್ಷಾತೀತವಾಗಿ ವಿಜಯದೇವ್ ಅವರನ್ನು ಗೆಲ್ಲಿಸಿದ್ದಾರೆ ಎಂದರು.