ಶಿವಮೊಗ್ಗ: ಗಾಜನೂರಿನಲ್ಲಿ ಯುವತಿಯ ಅಪಹರಣ ಪ್ರಕರಣದ ಕುರಿತು ನಗರದಲ್ಲಿ ಸ್ಪಷ್ಟನೆ ನೀಡಿದ ಎಸ್ಪಿ ಮಿಥುನ್ ಕುಮಾರ್
ಶಿವಮೊಗ್ಗ ತಾಲೂಕಿನ ಗಾಜನೂರಿನ ಬಳಿ ಯುವತಿಯ ಅಪಹರಣ ಪ್ರಕರಣ ಕುರಿತಂತೆ ಶಿವಮೊಗ್ಗದಲ್ಲಿ ಬುಧವಾರ ಗುರುವಾರ ಸಂಜೆ ಗಾಜಿನರಿನ ಜಲಾಶಯಕ್ಕೆ ಯುವತಿ ಹಾಗೂ ಇಬ್ಬರು ಯುವಕರು ಯುವತಿಯ ಸ್ನೇಹಿತನ ಸ್ನೇಹಿತನಿಂದಲೇ ಯುವತಿಯ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ತಲೆಯ ಮೀನು ಹಿಡಿಯುವ ನಾಲ್ಕು ಜನ ಯುವಕರು ಮಧ್ಯಪ್ರವೇಶಿಸಿದ್ದಾರೆ. ಕೂಡಲೇ ಅಲ್ಲಿಂದ ಯುವತಿಯ ಜೊತೆ ಬಂದಿದ್ದಂತಹ ಯುವಕರು ಓಡಿ ಬಂದು ಯುವತಿಯ ಅಪಹರಣ ಕುರಿತಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದರು. ಪೊಲೀಸರು ಯುವತಿಯನ್ನ ಪತ್ತೆಹಚ್ಚಿದ್ದಾರೆ. ಯುವತಿಯನ್ನು ನಾಲ್ಕು ಜನ ಯುವಕರು ಪಂಪ್ ಹೌಸ್ ಗೆ ಕರೆದುಕೊಂಡು ಹೋಗಿದ್ದರು ಎಂದು ಈ ವೇಳೆ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಳಿಕ ಮಾಹಿತಿ ನೀಡುತ್ತೇನೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.