ಬೆಂಗಳೂರು ಉತ್ತರ: ಡಿಕೆಶಿ ಬೈಕ್ ಲವ್ ನೋಡಿ! ಹೆಬ್ಬಾಳದಲ್ಲಿ ಭರ್ಜರಿ ರೌಂಡ್ಸ್
ಆಗಸ್ಟ್ 18ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಹೆಬ್ಬಾಳ ಫ್ಲೈ ಓವರ್ ಲೋಕಾರ್ಪಣೆ ಮಾಡಲಾಯಿತು. ಡಿ ಸಿ ಎಂ ಡಿ ಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಶಾಸಕ ಹ್ಯಾರಿಸ್ ಸೇರಿ ಅನೇಕರು ಉಪಸ್ಥಿತಿ ಇದ್ದರು. ಇವಳೇ ಫ್ಲೈ ಓವರ್ ಮೇಲೆ ಡಿಸಿಎಂ ಬೈಕ್ ರೌಂಡ್ಸ್ ಹಾಕಿದ್ದಾರೆ ಕಳೆದ ಬಾರಿ ಟ್ರಾಫಿಕ್ ಫೈನ್ ಇದ್ದಂತಹ ಬೈಕ್ ಓಡಿಸಿ ಟ್ರೋಲ್ ಆಗಿದ್ದ ಡಿಸಿಎಂ ಈ ಸಲ ಎಚ್ಚೆತ್ತುಕೊಂಡಿದ್ದಾರೆ. ಕನಕಪುರದಲ್ಲಿ ಡಿಕೆ ಬಳಕೆ ಮಾಡ್ತಾ ಇದ್ದಂತಹ ಬೈಕ್ ಅನ್ನ ರಿಪೇರಿ ಮಾಡಿ ಬೆಂಬಲಿಗರು ತಂದಿದ್ದರು. ಅದೇ ಬೈಕ್ ಹತ್ತಿಡಿಕೆ ಹೆಬ್ಬಾಳ ಮೇಲ್ಸೇತುವೆ ಮೇಲೆ ರೌಂಡ್ಸ್ ಹಾಕಿದ್ದಾರೆ