ಬೆಂಗಳೂರು ಉತ್ತರ: ಇವರು ಧರ್ಮಸ್ಥಳಕ್ಕೆ ಹೋಗಿರೊದು ನೋಡಿದ್ರೆ, ಇವರೇ ಇದರ ಹಿಂದೆ ಇದ್ದಾರೆ ಎನ್ನಿಸುತ್ತೆ: ನಗರದಲ್ಲಿ ಶಾಸಕ ಪೊನ್ನಣ್ಣ
ಧರ್ಮ ಜಾತಿಯ ಮೇಲೆ ರಾಜಕೀಯ ಮಾಡ್ತಾರೆ, ಬಿಜೆಪಿಯಿಂದ ಇದನ್ನೇ ನಿರೀಕ್ಷೆ ಮಾಡಲು ಸಾಧ್ಯ ಎಂದು ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕಾನೂನು ಸಲಹೆಗಾರ ಶಾಸಕ ಪೊನ್ನಣ್ಣ ಮಾತನಾಡಿದರು. ದೂರುದಾರನ 164 ಹೇಳಿಕೆಯ ಆಧಾರದ ಮೇಲೆ ತನಿಖೆ ಮಾಡ್ತಿದ್ದಾರೆ, ಪಾರದರ್ಶಕ ತನಿಖೆಯನ್ನ ಸರ್ಕಾರ ಮಾಡ್ತಿದೆ. ಇದನ್ನ ರಾಜಕಾರಣ ಮಾಡಬಾರದು. ಇವರು ಧರ್ಮಸ್ಥಳಕ್ಕೆ ಹೋಗಿರೊದು ನೋಡಿದ್ರೆ, ಇವರೇ ಇದರ ಹಿಂದೆ ಇದ್ದಾರೆ ಎನ್ನಿಸುತ್ತೆ. ಅಭಿವೃದ್ಧಿ ವಿಚಾರವಾಗಿ ಮಾತಾಡಲ್ಲ ಅವರು. ಗೃಹ ಸಚಿವರು ತನಿಖೆಯ ಬಗ್ಗೆ ಹೇಳಿದ್ದಾರೆ, ದೂರುದಾರನ ಬಗ್ಗೆಯೂ ತನಿಖೆ ಮಾಡ್ತಿದ್ದಾರೆ ಎಂದರು.