ಬೆಂಗಳೂರು ಉತ್ತರ: ಧರ್ಮಸ್ಥಳ ಎಸ್ಐಟಿ ತನಿಖೆ; ಇದರಲ್ಲಿ ಬಹಳ ದೊಡ್ಡ ಷಡ್ಯಂತ್ರ ನಡೆದಿದೆ: ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್
ಧರ್ಮಸ್ಥಳ ಎಸ್ಐಟಿ ತನಿಖೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದರಲ್ಲಿ ಬಹಳ ದೊಡ್ಡ ಷಡ್ಯಂತ್ರ ನಡೆದಿದೆ. ಇದೊಂದು ದೊಡ್ಡ ಷಡ್ಯಂತ್ರ, ಯಾರದ್ದು ಷಡ್ಯಂತ್ರ ಅಂತ ಹೇಳಲ್ಲ. ವೆಲ್ ಪ್ಲಾನ್ಡ್ ಸ್ಟಾಟರ್ಜಿ ಮಾಡಿ ಅವರ ಮೇಲೆ ಕಪ್ಪು ಚುಕ್ಕೆ ತರಲು ನೋಡ್ತಿದ್ದಾರೆ ಯಾರು? ಏನು ಅಂತ ನಾನು ಮಾತಾಡುವುದಕ್ಕೆ ಹೋಗುವುದಿಲ್ಲ. ನೂರಾರು ವರ್ಷದಿಂದ ಬಂದ ಪರಂಪರೆ ಹಾಳು ಮಾಡೋದಕ್ಕೆ ಹೊರಟಿದ್ದಾರೆ. ನಮೆಗೆಲ್ಲ ನಂಬಿಕೆ ಇದೆ, ಧಾರ್ಮಿಕ ಇಲಾಖೆಯನ್ನು ಸರ್ಕಾರ ನಡೆಸುತ್ತಿದ್ದೇವೆ, ನಮಗೆಲ್ಲ ಗೌರವ ಇದೆ ಎಂದರು.