ಬೆಂಗಳೂರು ಉತ್ತರ: ತೆರವಾಗಿರುವ ಸಚಿವ ಸ್ಥಾನವನ್ನ ವಾಲ್ಮೀಕಿ ಸಮುದಾಯಕ್ಕೆ ನೀಡಬೇಕು: ನಗರದಲ್ಲಿ ಶಾಸಕಿ ಕರೆಮ್ಮ ನಾಯಕ್
ಕೆ.ಎನ್ ರಾಜಣ್ಣ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ಕರೆಮ್ಮ ನಾಯಕ್ ಅವರು, ರಾಜಣ್ಣ ಅವರು ನಮ್ಮ ವಾಲ್ಮೀಕಿ ಸಮಾಜದ ಹಿರಿಯ ನಾಯಕ. ಅಂತವರ ರಾಜೀನಾಮೆ ಸರ್ಕಾರ ಪಡೆದಿದೆ. ಇದು ನಮ್ಮ ಸಮುದಾಯಕ್ಕೆ ಬೇಸರ ಆಗಿದೆ. ರಾಜಣ್ಣ ಅಷ್ಟೇ ಅಲ್ಲ, ನಾಗೇಂದ್ರ ಕೂಡ ಬಲಿ ಆದ್ರು. ವಾಲ್ಮೀಕಿ ಸಮುದಾಯ ಇದನ್ನ ಖಂಡಿಸಲಿದೆ. ಸಮಾಜದ ಪರವಾಗಿ ಮಾತಾಡ್ತಿದ್ದೇವೆ. ನಾವು ಗೆದ್ದ ಸಂಧರ್ಭದಲ್ಲಿ ವಾಲ್ಮೀಕಿ ಸಮಾಜದ ಶಾಸಕರನ್ನ ಕರೆದು ಅಭಿನಂದಿಸಿದ್ರು. ಅಂತವರ ಬಗ್ಗೆ ಸಮಾಜಕ್ಕೆ ಕಳಕಳಿ ಇದೆ. ಈಗ ಸಚಿವ ಸ್ಥಾನ ತೆರವಾಗಿದ್ದು, ಎರಡೂ ಸ್ಥಾನ ವಾಲ್ಮೀಕಿ ಸಮುದಾಯಕ್ಕೆ ನೀಡಬೇಕು ಅಂತ ಆಗ್ರಹಿಸ್ತೇವೆ ಎಂದರು.