ಬೆಂಗಳೂರು ಉತ್ತರ: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಪಾರದರ್ಶಕವಾಗಿ ಕ್ರಮ ಕೈಗೊಂಡಿದೆ: ನಗರದಲ್ಲಿ ಶಾಸಕ ಆರ್.ವಿ.ದೇಶಪಾಂಡೆ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರು, ಧರ್ಮಸ್ಥಳ ಪೂಜ್ಯ ಸ್ಥಳ, ಅಲ್ಲಿ ದೇವರ ಆಶೀರ್ವಾದ, ಧರ್ಮಾಧಿಕಾರಿಗಳ ಆಶೀರ್ವಾದ ಪಡೆಯಲು ಹೋಗ್ತೇವೆ. 13 ಸ್ಥಳದಲ್ಲಿ ಮೃತ ದೇಹ ಇದೆ ಎಂದು ಹೇಳಿದ್ದಾರೆ, ಸರ್ಕಾರ ಪಾರದರ್ಶಕ ರೀತಿಯಲ್ಲಿ ಕ್ರಮ ತೆಗೆದುಕೊಂಡಿದೆ. ಅವರ ಅಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಉದ್ದೇಶ ಪೂರಕವಾಗಿ, ಯಾರಿಗೂ ಅವಮಾನ ಮಾಡಬಾರದು. ಧರ್ಮಾಧಿಕಾರಿಗಳು ಯಾವ ಅಪರಾಧ ಮಾಡಿಲ್ಲ, ಪೂಜ್ಯ ಸ್ಥಾನದಲ್ಲಿ ಇದ್ದಾರೆ ಅವರ ಬಗ್ಗೆ ಮಾತನಾಡಬಾರದು ಎಂದರು.