ಬೆಂಗಳೂರು ಉತ್ತರ: ನಟ ದರ್ಶನ್ ಬಂಧನ; ನಾಳೆ ಬಿಡುಗಡೆ ಆಗಬೇಕಿದ್ದ 'ಇದ್ರೇ ನೆಮ್ದಿಯಾಗ್ ಇರ್ಬೇಕ್' ಸಾಂಗ್ ರಿಲೀಸ್ ಮುಂದೂಡಿಕೆ
ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ಗುರುವಾರ ಶಾಕ್ ನೀಡಿದೆ. ರೇಣುಕಾಸ್ವಾಮಿ ಕೊಲೆ ಆರೋಪದಡಿ, ಎ೨ ಆರೋಪಿಯಾಗಿರುವ ನಟ ದರ್ಶನ್ ಮುಂದಿನ ಕೆಲ ತಿಂಗಳು ಜೈಲಿನಲ್ಲಿ ಕಾಲಕಳೆಯಬೇಕಿದೆ. ಈ ನಡುವೆ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ಡೆವಿಲ್ ಸಿನಿಮಾದಿಂದ ಸ್ವಾತಂತ್ರ್ಯ ದಿನಕ್ಕೆ ಇದ್ರೆ ನೆಮ್ದಿಯಾಗ್ ಇರ್ಬೇಕ್ ಹಾಡು ಬಿಡುಗಡೆ ಆಗಬೇಕಿತ್ತು. ಇದೀಗ, ಆ ದರ್ಶನ್ ಮತ್ತೆ ಜೈಲು ಸೇರಲಿರುವ ಬೆನ್ನಲ್ಲೆ ಹಾಡು ಬಿಡುಗಡೆ ಆಗುತ್ತಿಲ್ಲ. ಈ ವಿಚಾರ ಅಭಿಮಾನಿಗಳ ಕಿವಿಗೂ ಬಿದ್ದಿದ್ದು, ನಿರಾಸೆಗೊಂಡಿದ್ದಾರೆ. ಅಂದಹಾಗೆ, ದಿ ಡೆವಿಲ್ ಸಿನಿಮಾವನ್ನು ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ.