ಬೆಂಗಳೂರು ಉತ್ತರ: ಕಾಂಗ್ರೆಸ್ ಅಂದ್ರೆ ಕಮಿಷನ್, ಕರೆಪ್ಷನ್, ಲೂಟಿ: ನಗರದಲ್ಲಿ ಛಲವಾದಿ ನಾರಾಯಣಸ್ವಾಮಿ ಕಿಡಿ
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮಲ್ಲೇಶ್ವರಂ ಬಿಜೆಪಿ ಕಛೇರಿಯಲ್ಲಿ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಂಎಲ್‌ಸಿ ಎನ್ ರವಿಕುಮಾರ್, ಮಾಜಿ ಸಚಿವ ಎನ್ ಮಹೇಶ್ ಭಾಗಿಯಾಗಿ ಸುದ್ದಿಗೋಷ್ಟಿ ನಡೆಸಿದ್ದು ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ಅತಿಯಾಗಿದೆ. ಕಾಂಗ್ರೆಸ್ ಅಂದ್ರೆ ಕಮೀಷನ್, ಕರೆಪ್ಷನ್, ಲೂಟಿ, ದುಂಡಾವರ್ತಿ ಇಷ್ಟೇ ಹೇಳ್ತಿದ್ದೋ. ಆದ್ರೆ ಈಗ ಮಾನವೀಯ ಮೌಲ್ಯ ಮರೆತು, ಅಧಿಕಾರ ಇದ್ರೆ ದುಂಡಾವರ್ತಿ ಮಾಡೋದಕ್ಕೂ ಹೇಸಲ್ಲ. ಗೌರವಾನ್ವಿತ ಎಂಪಿ ರಾಜಶೇಖರ ಹಿಟ್ನಾಳ್ ಅವರು ಹೊರ ದೇಶದಿಂದ ಬಂದ ಮಹಿಳೆ ರೇಪ್ ಆಂಡ್ ಮರ್ಡರ್ ಆಗಿದ್ದರೆ, ಇದನ್ನ ಮೈನರ್ ಘಟನೆ ಅಂತ ಹೇಳಿದ್ದಾರೆ. ಇಷ್ಟು ನೀಚತನಕ್ಕೆ ಕಾಂಗ್ರೆಸ್ ಇಳಿದಿದೆ.