ಬೆಂಗಳೂರು ಉತ್ತರ: ಬೇಳೂರು ಗೋಪಾಲಕೃಷ್ಣ ವಿರುದ್ದ 5 ಕೋಟಿ ಮಾನನಷ್ಟ ಮೊಕದ್ದೊಮೆ: ನಗರದಲ್ಲಿ ಹರತಾಳು ಹಾಲಪ್ಪ
ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಿದ್ದೇನೆ. ಈ ಸಂಬಂಧ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದೇನೆ. ನಾನು ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಹೇಳಿದ್ದೇನೆ ಎಂದು ಪದೇಪದೇ ಆರೋಪ ಮಾಡಲಾಗುತ್ತಿದೆ. ಆದರೆ ನಾನು ಎಂದಿಗೂ ಹಾಗೆ ಹೇಳಿಲ್ಲ. ನನ್ನ ಸಂಪೂರ್ಣ ಕುಟುಂಬವೇ ಸಿಗಂದೂರು ದೇವಸ್ಥಾನದ ಪರವಾಗಿದೆ. ನಾವು ಎಂದೂ ಸಹ ದೇವಸ್ಥಾನ ವಿರೋಧಿ ನಿಲುವು ಹೊಂದಿಲ್ಲ ಎಂದರು.