ಅಂಬೇಡ್ಕರ್ ಸೇವಾ ಸಮಿತಿ ರಿ ಕರ್ನಾಟಕ, ಸಂಸ್ಥಾಪಕ, ರಾಜ್ಯಾಧ್ಯಕ್ಷರಾದ, ಡಾ. ಕೆ. ಎಂ. ಸಂದೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ರಾಹುಲ್ ಕೊಲ್ಲೂರಕರ್
ಯಾದಗಿರಿ : ಅಂಬೇಡ್ಕರ್ ಸೇವಾ ಸಮಿತಿ (ರಿ) ಕರ್ನಾಟಕ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಕೆ. ಎಂ. ಸಂದೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯಾದಗಿರಿ ನಗರದ ಕೋಟೆಗಾರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್, ಪೆನ್ಸಿಲ್ ಹಾಗೂ ಅಂಗನವಾಡಿ ಮಕ್ಕಳಿಗೆ ಸ್ಲೇಟ್, ಚಾಕ್ಪೀಸ್ ಮತ್ತು ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿ (ರಿ) ಕರ್ನಾಟಕದ ಯಾದಗಿರಿ ಜಿಲ್ಲಾಧ್ಯಕ್ಷರಾದ ರಾಹುಲ್ ಕೊಲ್ಲೂರಕರ್ ಅವರು, ಡಾ. ಕೆ. ಎಂ. ಸಂದೇಶ್ ಅವರು ಕೇವಲ ಒಬ್ಬ ಸಂಘಟನೆಯ ನಾಯಕರು ಮಾತ್ರವಲ್ಲದೆ, ದೀನದಲಿತರು, ಶೋಷಿತರು, ಬಡವರು, ರೈತರು ಹಾಗೂ ಅನ್ಯಾಯಕ್ಕೆ ಒಳಗಾದವರ ಪಾಲಿನ ನಿಜಜೀವನದ,ಬಡವರ, ಶೋಷಿತರ ಹಾಗೂ ರೈತರ ಪಾಲಿನ ಹೀರೋ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಭೂಗಳ್ಳರಿಂದ ಬಡ ರೈತರ ಜಮೀನುಗಳನ್ನು ರಕ್ಷಿಸಿ, ಸಾವಿರಾರು ಎಕರೆ ಭೂಮಿಯನ್ನು ಬಡ ರೈತರಿಗೆ ಉಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜಾತಿ-ಧರ್ಮದ ಭೇದಭಾವವಿಲ್ಲದೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಪ್ರತಿ ಶುಕ್ರವಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾವಿರಾರು ಜನರ ಸಮಸ್ಯೆಗಳನ್ನು ಆಲಿಸಿ, ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಮಾನವೀಯ ಗುಣ ಹೊಂದಿದ್ದಾರೆ. ಅನೇಕ ನೊಂದ ಮಹಿಳೆಯರಿಗೂ ನ್ಯಾಯ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಡಾ. ಕೆ. ಎಂ. ಸಂದೇಶ್ ಅವರ ನೇತೃತ್ವದಲ್ಲಿ ಈವರೆಗೆ 435 ಯಶಸ್ವಿ ಹೋರಾಟಗಳು, 181 ಅಂತರ್ಜಾತಿ ವಿವಾಹಗಳಿಗೆ ನೆರವು ಹಾಗೂ 5,960 ಎಕರೆ ಬಡವರ ಜಮೀನುಗಳ ರಕ್ಷಣೆ ಸೇರಿದಂತೆ ಅನೇಕ ಜನಪರ ಕಾರ್ಯಗಳು ನಡೆದಿವೆ. ಅಲ್ಲದೆ, ಅಂತರರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ, 2022ರ ಭಾರತೀಯ ಐಕಾನ್ ಪ್ರಶಸ್ತಿ, ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಒಟ್ಟು 53 ರಾಜ್ಯ ಪ್ರಶಸ್ತಿಗಳನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ರಾಹುಲ್ ಕೊಲ್ಲೂರಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಯಕನ ಹುಟ್ಟುಹಬ್ಬವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಬಡ ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯದೊಂದಿಗೆ ಆಚರಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು,ದೇವಿದ್ರಪ್ಪ ಕೊಲ್ಲೂರ್, ತಿಪಣ್ಣ ಹಳಿಗೇರಿ,ಬಿ. ಆಂಜನೇಯ ಭಂಡಾರಿ, ಮೌನೇಶ್ ಗಿರೆಪ್ಪನೋರ್, ಎಸ್. ಸೈದಪ್ಪ ಕೂಲೂರ್, ಮೋನಪ್ಪ ಮುನೇಪ್ಪನೋರ್, ರಮೇಶ್ ಕ್ಯಾತ್ನಾಳ್,ಅಯ್ಯಪ್ಪ,ಕುಮಾರ್ ಅರಿಕೇರಿ,ರಾಧಾಕೃಷ್ಣ ಕೌಳೂರ್,ರಮೇಶ್ ಗಣಪುರ,ಪ್ರವೀಣ್ ಗಿರೆಪ್ಪನೋರ್,ಸೇರಿದಂತೆ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Yadgir, Yadgir | Nov 8, 2026