ನಾಯಕತ್ವ ಎಂಬುದು ಕೇವಲ ಅಧಿಕಾರದ ಗದ್ದುಗೆಯಲ್ಲ; ಅದು ಜನಸಾಮಾನ್ಯರ ಕಣ್ಣೀರು ಒರೆಸುವ, ಅವರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುವ ಒಂದು ದೊಡ್ಡ ಜವಾಬ್ದಾರಿ. ಇಂತಹ ನೈಜ ಜನನಾಯಕನ ಗುಣಗಳನ್ನು ಮೈಗೂಡಿಸಿಕೊಂಡು, ತಮ್ಮ ಸರಳತೆ, ನೇರ ನಡೆ-ನುಡಿ ಹಾಗೂ ಅಭಿವೃದ್ಧಿಪರ ಚಿಂತನೆಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ನಾಯಕ ಶರಣಗೌಡ ಕಂದಕೂರ
ಅಭಿವೃದ್ಧಿಯ ಹಾದಿಯಲ್ಲಿ ಗುರುಮಠಕಲ್: ಜನನಾಯಕ ಶರಣಗೌಡ ಕಂದಕೂರರ ಜನಪರ ದೃಷ್ಟಿಕೋನ
ಯಾದಗಿರಿ : ಸತ್ಯ, ಪ್ರಾಮಾಣಿಕತೆ ಮತ್ತು ಸತತ ಜನಸೇವೆಯನ್ನು ತನ್ನ ರಕ್ತದಲ್ಲೇ ಬಳುವಳಿಯಾಗಿ ಪಡೆದುಕೊಂಡು, ಹಿಂದುಳಿದ ಗುರುಮಠಕಲ್ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ನೀಡುತ್ತ ಬಂದಿರುವ ಯುವ ನಾಯಕ ಶರಣಗೌಡ ಕಂದಕೂರ ಅವರ ಜನುಮದಿನದ ನಿಮಿತ್ತ ಅವರ ಸಾವಿರಾರು ಅಭಿಮಾನಿಗಳು ನ.೧೭ರಂದು ಹಲವೆಡೆ ಅನ್ನದಾಸೋಹ, ದೇವಸ್ಥಾನಗಳಲ್ಲಿ ಪೂಜೆ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿ ತಮ್ಮ ಜನನಾಯಕನ ಅಭಿಮಾನವನ್ನು ಮೆರೆದಿದ್ದಾರೆ.
ಶಾಸಕ ಶರಣಗೌಡ ಕಂದಕೂರ ಜನುಮದಿನದ ನಿಮಿತ್ತ ಯಾದಗಿರಿ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದ ಎದುರು ಜಿಲ್ಲಾ ಜೆಡಿಎಸ್ ಐಟಿ ಘಟಕ ಹಾಗೂ ಅಭಿಮಾನಿಗಳಿಂದ ಕೇಕ್ ಸೇವೆ ಹಾಗೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಇದೇ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿಯವರು ತಮ್ಮ ಜನನಾಯಕ ಶಾಸಕ ಶರಣಗೌಡ ಕುರಿತು ಮಾತನಾಡಿದ ಅಭಿಮಾನದ ನುಡಿಗಳು, ಜನಪರ ಕಾಳಜಿಯನ್ನು ಮೈಗೂಡಿಸಿಕೊಂಡಿರುವ ಶರಣಗೌಡ ಕಂದಕೂರ ಅವರು ಕೇವಲ ರಾಜಕಾರಣಿಯಾಗಿರದೆ ಕ್ಷೇತ್ರದ ಪ್ರತಿ ಹಳ್ಳಿ, ಪ್ರತಿ ಮನೆಗೂ ಅಭಿವೃದ್ಧಿಯ ಬೆಳಕು ಚೆಲ್ಲುತ್ತಿರುವ ಮಾದರಿ ಜನನಾಯಕರಾಗಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಪ್ರಥಮ ಆದ್ಯತೆ ಎಂದು ಹಗಲಿರುಳು ಶ್ರಮಿಸುತ್ತಿರುವ ಯುವ ನಾಯಕ ನಮಗೆ ಸಿಕ್ಕಿರುವುದು ನಮ್ಮ ಪುಣ್ಯವೇ ಸರಿ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರ ಅಂದರೆ ಹಿಂದೆ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಹತ್ತು ಹಲವು ಸವಾಲುಗಳಿಗೆ ಹೆಸರಾಗಿತ್ತು. ಆದರೆ, ಶರಣಗೌಡ ಕಂದಕೂರ ಅವರ ತಂದೆ ದಿ.ನಾಗನಗೌಡ ಕಂದಕೂರ ಅವರು ಅವರು ಶಾಸಕರಾಗಿ ಅಧಿಕಾರ ವಹಿಸಿಕೊಂಡಾಗಿನಿAದಲೂ ಶರಣಗೌಡ ಕಂದಕೂರ ಅವರು ಈ ಹಿಂದುಳಿದ ಹಣೆಪಟ್ಟಿ ಬದಲಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕದAತಹ ಮೂಲಭೂತ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದರ ಜೊತೆಗೆ ತಂದೆಯ ನಂತರ ಶಾಸಕರಾಗಿ ಆಯ್ಕೆಯಾದ ಶರಣಗೌಡ ಕಂದಕರ ಅವರು ಸರ್ಕಾರದ ಮಟ್ಟದಲ್ಲಿ ಗಟ್ಟಿಯಾದ ಧ್ವನಿಯಾಗಿ ನಿಂತು, ತಮ್ಮ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವಲ್ಲಿ ಇವರು ಸದಾ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಮಾಧ್ಯಮ ವಕ್ತಾರರಾದ ಮಲ್ಲಣಗೌಡ ಹಳಿಮನಿ ಕೌಳೂರು ಮಾತನಾಡಿ, ಜನರ ಧ್ವನಿಯಾಗಿ ಸದನದಲ್ಲಿ ಹೋರಾಟ ಮಾಡುತ್ತಾ ಕ್ಷೇತ್ರದ ರೈತರ ಕಷ್ಟ-ಕಾರ್ಪಣ್ಯಗಳು, ಸೌಲಭ್ಯಗಳ ವಂಚಿತತೆ ಹಾಗೂ ಪ್ರಾದೇಶಿಕ ಅಸಮತೋಲನದ ವಿರುದ್ಧ ಧ್ವನಿ ಎತ್ತುವ ಮೂಲಕ ಶರಣಗೌಡ ಕಂದಕೂರ ಅವರು ಕೇವಲ ಸ್ಥಳೀಯ ನಾಯಕನಷ್ಟೇ ಅಲ್ಲದೆ, ರಾಜ್ಯಮಟ್ಟದಲ್ಲಿ ಗಮನ ಸೆಳೆದ ಯುವ ನಾಯಕರಾಗಿದ್ದಾರೆ. ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜಿಯಾಗದ ಹೋರಾಟದ ಗುಣವೇ ಇವರನ್ನು ಜನಮಾನಸದಲ್ಲಿ ವಿಶೇಷ ಸ್ಥಾನದಲ್ಲಿರಿಸಿದೆ. ಅಧಿಕಾರದ ಗದ್ದುಗೆಯಲ್ಲಿದ್ದರೂ ಮಣ್ಣಿನ ಮಕ್ಕಳಾಗಿ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಹೊಂದಿರುವ ಸರಳ ಸಜ್ಜನಿಕೆಯ ಯುವ ನಾಯಕ ನಮ್ಮ ಹೆಮ್ಮೆಯ ಶರಣಗೌಡ ಕಂದಕೂರ ಆಗಿದ್ದಾರೆ ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ರಾಜು ಉಡುಪಿ, ಲಕ್ಷ್ಮಣ್ ನಾಯಕ್ ಕೂಡ್ಲೂರು, ಅಲ್ಲಾವುದ್ದಿನ್ ನೀಲಹಳ್ಳಿ ಅಧ್ಯಕ್ಷರು ಐಟಿ ಘಟಕ, ಯಲ್ಲಾಲಿಂಗ ಚಾಮನಳ್ಳಿ, ಶಿವು ಗೌಡ ಸೈದಾಪುರ, ಷಣ್ಮುಖ ಎಸ್ ಬಡಿಗೇರ್, ಶಿವು ಯಂಪಾಡ್, ಪವನ್, ಸಿದ್ದಲಿಂಗರೆಡ್ಡಿ ಗೌಡ, ಬಂದುಗೌಡ ಭೀಮನಳ್ಳಿ, ಭೀಮು ಗೋಪಾಳಪುರ, ಸಾಗರ್ ಹುಲ್ಲೆರ್, ಬಸ್ಸು, ಮಾಡಿವಾಳ, ಸುರೇಶ, ತಾಯಪ್ಪ ನಾಗಲಪುರ, ಸಾಬು ನಾಯಕ, ಭೀಮು ಶಾಸ್ತ್ರೀ, ತೈಸಿನ್, ರಾಮಚಂದ್ರ, ಬಸ್ಸು ಸೈದಾಪುರ ನಾಗರೆಡ್ಡಿ. ರಾಜು ಕೂಡ್ಲೂರು, ಪರಶುರಾಮ, ವಿಜಯ್, ರಾಜುಸಾಲಿ, ಮಲ್ಲಿಕಾರ್ಜುನ ಅಯ್ಯಾಳ, ಭೀಮು ರಾಂಪೂರ, ಅಶೋಕ್ ತೇಜ್, ಗೋವಿಂದ, ಶಕೀಲ್ ಇತರರಿದ್ದರು.
ಯುವ ಜನತೆಗೆ ಸ್ಫೂರ್ತಿ
ಗುರುಮಠಕಲ್ ಕ್ಷೇತ್ರವನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂಚೂಣಿಗೆ ತರಬೇಕು ಎಂಬುದು ಶಾಸಕ ಶರಣಗೌಡ ಕಂದಕೂರ ಅವರ ಕನಸು. ಯುವಕರಿಗೆ ಉದ್ಯೋಗಾವಕಾಶಗಳು, ಕೃಷಿಕರಿಗೆ ಅಗತ್ಯ ನೆರವು ಹಾಗೂ ಬಡವರಿಗೆ ಸೌಕರ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನೂತನ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ.
- ಸುಭಾಶ್ಚಂದ್ರ ಕಟಕಟಿ ಜೆಡಿಎಸ್ ಜಿಲ್ಲಾಧ್ಯಕ್ಷರು ಯಾದಗಿರಿ
ಸ
ಕಲ್ಯಾಣ ಕರ್ನಾಟಕದ ಧ್ವನಿ
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಶರಣಗೌಡ ಕಂದಕೂರ ಕಂಡ ಕನಸುಗಳು ಮತ್ತು ಅವುಗಳನ್ನು ನನಸಾಗಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಮೂಲಭೂತ ಸೌಕರ್ಯಗಳ ಸುಧಾರಣೆ, ಶಿಕ್ಷಣ, ಆರೋಗ್ಯ ಮತ್ತು ಯುವಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅವರ ನಿರಂತರ ಹೋರಾಟಕ್ಕೆ ಜನರ ಬೆಂಬಲ ಇದೆ. ಅಭಿವೃದ್ಧಿಯ ಹರಿಕಾರರಾಗಿ ಮುನ್ನಡೆಯುತ್ತಿರುವ ಶರಣಗೌಡ ಕಂದಕೂರ ಅವರಿಗೆ ಭಗವಂತನು ಆಯುರಾರೋಗ್ಯ, ದೀರ್ಘಾಯುಷ್ಯ ಹಾಗೂ ಮತ್ತಷ್ಟು ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸೋಣ.
- ಮಲ್ಲಣಗೌಡ ಹಳಿಮನಿ ಕೌಳೂರು ಜೆಡಿಎಸ್ ಮಾಧ್ಯಮ ವಕ್ತಾರರು ಯಾದಗಿರಿ
Yadgir, Yadgir | Nov 19, 2026