ಇಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ
===================
ಯಾದಗಿರಿ, ನವೆಂಬರ್.21 : ಜಾಕವೆಲ್ನಿಂದ ಫಿಲ್ಟರ್ ಬೆಡ್ಗೆ ಸಂಪರ್ಕ ಕಲ್ಪಿಸುವ ಮುಖ್ಯ ರೈಸಿಂಗ್ ಪೈಪ್ ಲೈನ್ ಮುದ್ನಾಳ ಹೋಂಡಾ ಶೋ ರೂಮ್ ಹತ್ತಿರ ಲಿಕೆಜ್ ಆಗುತ್ತಿದ್ದು, ಇದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಸದರಿ ಲಿಕೇಜನ್ನು ರಿಪೇರಿ ಮಾಡುವ ಅವಶ್ಯಕತೆ ಇರುವುದರಿಂದ ದಿನಾಂಕ: 21-11-2026 ರಂದು ಯಾದಗಿರಿ ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ. ದುರಸ್ತಿ ಕಾರ್ಯ ಸುಗಮವಾಗಿ ನಡೆಯಲು ನಗರದ ಸಾರ್ವಜನಿಕರು ಸಹಕರಿಸಬೇಕೆಂದು ಯಾದಗಿರಿ ನಗರಸಭೆ ಪೌರಾಯುಕ್ತರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Yadgir, Yadgir | Nov 21, 2026