ಬೆಂಗಳೂರು ಉತ್ತರ: ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ದ ಇರ್ತೇವೆ: ನಗರದಲ್ಲಿ ಸಚಿವ ಎಂ.ಸಿ ಸುಧಾಕರ್
ವಿಧಾನಸೌಧದಲ್ಲಿ ಸಚಿವ ಎಂ.ಸಿ ಸುಧಾಕರ್ ಅವರು ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ವಜಾ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತನಾಡಿ, ರಾಜಣ್ಣ ಏನ್ ಹೇಳಿದ್ದಾರೆ ಅವರ ಬಗ್ಗೆ ಅವರನ್ನೇ ಕೇಳಬೇಕು, ನಾವು ಹೈಕಮಾಂಡ್ ತೀರ್ಮಾನಕ್ಕೆ ಗೌರವ ಕೊಡ್ತೇನೆ. ತಪ್ಪಾಗಿ ಅರ್ಥ ಆಗಿದ್ರೆ ಹೈಕಮಾಂಡ್‌ಗೆ ಮನವರಿಕೆ ಮಾಡ್ತೇವೆ ಎಂದಿದ್ದಾರೆ. ಹೈಕಮಾಂಡ್ ತಿರ್ಮಾನಕ್ಕೆ ನಾವೆಲ್ಲರೂ ಭದ್ದ ಇರಬೇಕು. ಕೆಲವು ವ್ಯಕ್ತಿಗಳು ಷಡ್ಯಂತ್ರ ಮಾಡಿದ್ದಾರೆ ಎಂದಿದ್ದಾರೆ, ಅದರ ಬಗ್ಗೆ ಅವರನ್ನೇ ಕೇಳಬೇಕು ಎಂದರು.