ಬೆಂಗಳೂರು ಉತ್ತರ: ಕಾರ್ಪೊರೇಷನ್ ಅಲ್ಲಿ ಕಾರ್ ಚಾಲಕನಾಗಿ ಕಂಟಕವಾದ ಮರ! ಹೊಸ ಕಾರು ಜಕಮ್
ಆಗಸ್ಟ್ 12ರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕಾರ್ ಮೇಲೆ ದೊಡ್ಡ ಮರ ಬಿದ್ದಿದೆ. ಕಾರ್ ರಿವರ್ಸ್ ತೆಗಿಯುವಂತಹ ಸಂದರ್ಭದಲ್ಲಿ ಮರ ಬಿದ್ದಿದ್ದು ಕಾರ್ ಸಂಪೂರ್ಣ ಜಕಮ್ ಆಗಿದೆ. ಕಾರ್ ಚಾಲಕ ನಿರಂಜನ್ ಕಾರನ್ನು ಪಾರ್ಕ್ ಮಾಡಿ ಹೋಗಿದ್ದರು. ಬಳಿಕ ಕಾರ್ ರಿವರ್ಸ್ ತೆಗಿಯೋ ಅಂತಹ ಸಂದರ್ಭದಲ್ಲಿ ದೊಡ್ಡ ಮರ ಬಿದ್ದಿದೆ. ಇದು ನನಗೆ ಪುನರ್ಜನ್ಮ ಅಂತ ಕಾರಿನಿಂದ ಆಚೆ ಬಂದಂತಹ ನಿರಂಜನ್ ಹೇಳಿದ್ರು. ಕಾರಿನ ಕಂಡೀಶನ್ ಕಂಡು ಕಾರು ಚಾಲಕ ತಬ್ಬಿಬಾಗಿದ್ದು ನಿಜ. ಈ ರೀತಿ ಅಪಾಯಕಾರಿ ಮರವನ್ನು ಗುರುತಿಸುವಂತಹ ಕೆಲಸವನ್ನು ಬಿಬಿಎಂಪಿ ಮಾಡಬೇಕು. ಇಲ್ಲಾಂದ್ರೆ ಈ ರೀತಿಯ ಪ್ರಕರಣ ಹೆಚ್ಚಳ ಆಗುತ್ತಿರುತ್ತೆ.