ಬೆಂಗಳೂರು ಉತ್ತರ: ರಾಜಣ್ಣ ಅವರ ಮೇಲೆ ಅನೇಕ ಷಡ್ಯಂತ್ರ ನಡೆಯುತ್ತಿದೆ: ನಗರದಲ್ಲಿ ಸುರೇಶ್ ಬಾಬು
ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಅವರು ಕೆ.ಎನ್ ರಾಜಣ್ಣ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ರಾಜಣ್ಣ ಮೇಲೆ ಹನಿಟ್ರಾಪ್ ಇಂದ ಹಿಡಿದು, ಅವರ ಮೇಲೆ ಅನೇಕ ಷಡ್ಯಂತ್ರ ನಡೆಯುತ್ತಿದೆ. ಪಕ್ಷದ ಹಂಗಿಲ್ಲದೆ ಮಾತಾಡಿದ್ದಕ್ಕೆ ತಲೆ ದಂಡ ಆಗಿದೆ. ಆಡಳಿತ ಪಕ್ಷಕ್ಕೆ ಚೀಟಿ ಕಳಿಸಿ ಮಾತಾಡೋ ವ್ಯವಸ್ಥೆ ಮಾಡಿದ್ರು. ನಮಗೂ ಇದರಲ್ಲಿ ಪಿತೂರಿ ಇದೆ ಅನಿಸ್ತಿದೆ. ಸಿಎಂ ಸದನಕ್ಕೆ ಬಂದಾಗ ಈ ಬಗ್ಗೆ ಚರ್ಚೆ ಮಾಡ್ತೇವೆ. ನಿನ್ನೆ ಸ್ಪಷ್ಟೀಕರಣ ಕೇಳಿದಾಗ ಜಾರಿಕೊಂಡ್ರು. ವಾಸ್ತವ ಮರೆಮಾಚೋ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.