ಬೆಂಗಳೂರು ಉತ್ತರ: ಕೆ.ಎನ್ ರಾಜಣ್ಣ ಅವರ ಆರೋಪದಲ್ಲಿ ನೂರಕ್ಕೆ ನೂರು ಸತ್ಯವಿದೆ: ನಗರದಲ್ಲಿ ಶಾಸಕ ಅರವಿಂದ್ ಬೆಲ್ಲದ್
ಕೆ ಎನ್ ರಾಜಣ್ಣ ತಲೆದಂಡ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್ ಅವರು, ಕೆ.ಎನ್ ರಾಜಣ್ಣ ವಾಲ್ಮೀಕಿ ಸಮಾಜದಿಂದ ಬಂದಿದ್ರು, ಕರ್ನಾಟಕ ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಿದ್ರು. ಇದೀಗ ತಮ್ಮ ವಿರುದ್ದ ಪಿತ್ತೂರಿ ಆಗಿದೆ ಎಂದಿದ್ದಾರೆ. ಇವರ ಆರೋಪದಲ್ಲಿ ನೂರಕ್ಕೆ ನೂರು ಸತ್ಯವಿದೆ. ರಾಜಣ್ಣ ಎಲ್ಲೋ ಹೇಳಿದ ಒಂದು ಹೇಳಿಕೆ ಏನಿದೆ, ಅದು ದೆಹಲಿಯಲ್ಲಿರುವ ರಾಹುಲ್ ಕಿವಿಗೆ ಬಿದ್ದಿದೆ.ಆ ವಿಚಾರ ಅವರ ಬಳಿಗೆ ಹೇಗೆ ಹೋಯಿತ್ತು. ನಿಮ್ಮ ಮಂತ್ರಿಗಳೇ ನಿಮ್ಮ ವಿರುದ್ದ ಮಾತನಾಡ್ತಿದ್ದಾರೆ. ರಾಹುಲ್ ಗಾಂಧಿಗೆ ಹೇಳಿ ಈ ರೀತಿ ಮಾಡಿದ್ದಾರೆ. ರಾಜಣ್ಣ ಅವರ ವಿಕೆಟ್ ಅನ್ನು ಉರುಳಿಸಿದ್ದಾರೆ ಎಂದರು.